ಹೂಡೆ ಬೀಚ್‌ನಲ್ಲಿ ಮುಳುಗಿ ಮೂವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಸಾವು

ಮಲ್ಪೆ: ಮಲ್ಪೆ ಸಮೀಪ ಹೂಡೆ ಬೀಚ್‌ನಲ್ಲಿ ಮಣಿಪಾಲದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ ಘಟನೆ ನಿನ್ನೆ ಸಂಭವಿಸಿದೆ.
ಸಂಜೆ 5:30 ರಿಂದ 6 ಗಂಟೆ ನಡುವೆ ಬೀಚ್‌ನಲ್ಲಿ ಈ ಘಟನೆ ನಡೆದಿದ್ದು,ಇಬ್ಬರ ಶವಗಳನ್ನು ಕೆಲವೇ ತಾಸಿನಲ್ಲಿ ಸ್ಥಳೀಯ ಈಜುಗಾರರು ಹೊರತೆಗೆದಿದ್ದಾರೆ.
ಭಾನುವಾರ ಸುಮಾರು 15 ವಿದ್ಯಾರ್ಥಿಗಳು ಬೀಚ್‌ಗೆ ಮೋಜು ಮಾಡಲು ಬಂದಿದ್ದರು. ಈ ಪೈಕಿ ಕೆಲವರು ಸ್ಥಳೀಯರ ಎಚ್ಚರಿಕೆಯನ್ನು ಕಡೆಗಣಿಸಿ ಅಪಾಯಕಾರಿ ಸ್ಥಳದಲ್ಲಿ ಈಜಲು ಇಳಿದಾಗ ಬಲವಾದ ಅಲೆ ಅಪ್ಪಳಿಸಿ ಸಮುದ್ರಪಾಲಾಗಿದ್ದಾರೆ.
ಈ ಬೀಚ್ ಮಲ್ಪೆ, ಕಾಪು ಬೀಚ್‌ನಂತೆ ಹೆಚ್ಚು ಜನರನ್ನು ಆಕರ್ಷಿಸುವುದಿಲ್ಲ. ವಿದ್ಯಾರ್ಥಿಗಳು ಈಜುವಾಗ ಯಾವುದೇ ಸುರಕ್ಷತಾ ಸಾಧನಗಳನ್ನು ಹೊಂದಿರಲಿಲ್ಲ. ಇಬ್ಬರು ವಿದ್ಯಾರ್ಥಿಗಳ ಶವಗಳನ್ನು ಹೊರತೆಗೆಯಲಾಗಿದ್ದು, ನಾಪತ್ತೆಯಾಗಿರುವ ಮತ್ತೋರ್ವ ವಿದ್ಯಾರ್ಥಿಗಾಗಿ ಪೊಲೀಸರು ನುರಿತ ಈಜುಗಾರರ ಸಹಾಯವನ್ನು ಪಡೆದಿದ್ದಾರೆ.
ಬೆಂಗಳೂರಿನ ಮೂಲದ ಇಬ್ಬರು ಯುವಕರಾದ 19 ವರ್ಷದ ನಿಶಾಂತ್ ಹಾಗೂ ಷಣ್ಮುಗ ಅವರ ಮೃತದೇಹ ಪತ್ತೆಯಾಗಿದ್ದು, ಹೈದರಾಬಾದ್‌ನ ಶ್ರೀಕರ ಅವರ ಮೃತದೇಹ ಶೋಧ ಕಾರ್ಯ ನಡೆದಿದೆ. ವಿದ್ಯಾರ್ಥಿಗಳ ಪೋಷಕರಿಗೆ ಈ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ.































































































error: Content is protected !!
Scroll to Top