ಕಾರ್ಕಳ : ಕಾರ್ಕಳ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಕುಕ್ಕುಂದೂರು, ಪುರಸಭೆ ಹಾಗೂ ಕುಕ್ಕುಂದೂರು ಅಂಗನವಾಡಿ ಕಾರ್ಯಕರ್ತೆಯರು ಜಂಟಿಯಾಗಿ ಪೋಷಣ್ ಅಭಿಯಾನ ಮಾಸಾಚರಣೆಯನ್ನ ಸೆ.16ರಂದು ಸ್ತ್ರೀ ಶಕ್ತಿ ಸಭಾಭವನದಲ್ಲಿ ನಡೆಸಿದರು. ಕುಕ್ಕುಂದೂರು ಗ್ರಾ..ಪಂ.ನ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಕುಮಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕುಕ್ಕುಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಡಾ. ಪ್ರತೀಕ್ಷಾ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಟಿ. ಎ. ಉಮೇಶ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಮನಾ ರಾವ್ ಉಪಸ್ಥಿತರಿದ್ದರು. ನಾಗಮ್ಮ ಸ್ವಾಗತಿಸಿ, ಕುಮುದಾವತಿಯವರು ಧನ್ಯವಾದವಿತ್ತರು.
ಕಾರ್ಕಳ : ಪೋಷಣ್ ಅಭಿಯಾನ ಮಾಸಾಚರಣೆ


































