ಕಾರ್ಕಳ : ರೆಂಜಾಳ ಶ್ರೀ ಮಹಾಮ್ಮಾಯಿ ದೇವಸ್ಥಾನದ ವರ್ಷಾವಧಿ ಮಹಾಪೂಜೆಯು ಮೇ. 3ರಂದು ನಡೆಯಲಿದೆ. ರಾತ್ರಿ ಗಂಟೆ 8:30ಕ್ಕೆ ಸಮಾಜರತ್ನ ಲೀಲಾಧರ ಶೆಟ್ಟಿ ಸಾರಥ್ಯದ ಬೈಲೂರು ಪ್ರಸನ್ನ ಶೆಟ್ಟಿ ರಚಿಸಿರುವ ಕಾಪು ರಂಗತರಂಗ ಕಲಾವಿದರಿಂದ ತುಳು ಹಾಸ್ಯಮಯ ಸಾಂಸಾರಿಕ ನಾಟಕ ಅಧ್ಯಕ್ಷೆರ್ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಕೃತಿ ಸಿಂಚನ ಪ್ರಕಟನೆಯಲ್ಲಿ ತಿಳಿಸಿದೆ.














































































