ನಂದಳಿಕೆ : ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ನೇತೃತ್ವದಲ್ಲಿ ಮೇ. 2 ರಿಂದ 7 ದಿನಗಳ ಮಕ್ಕಳ ಕುಣಿತ ಭಜನಾ ಸಪ್ತಾಹ ತರಬೇತಿ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಉದ್ವಾಟಿಸಿದರು. ಭಜನಾ ತರಬೇತಿಯಲ್ಲಿ 30 ಮಕ್ಕಳಿಗೆ ತರಬೇತಿ ನೀಡಲಾಯಿತು. ಸಂಘದ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ರಾಜೇಶ್, ಕಾರ್ಯದರ್ಶಿ ಹರಿಣಾಕ್ಷಿ ನಂದೀಶ್, ಸದಸ್ಯರಾದ ವೀಣಾ ಹರೀಶ್, ಪದ್ಮಶ್ರೀ ಸತೀಶ್, ಅಶ್ವಿನಿ ಬೋಳ, ಸಾಕ್ಷಿ ಕುಲಾಲ್, ಶ್ರದ್ಧಾ ಬೋಳ ಮೊದಲಾದವರು ಉಪಸ್ಥಿತರಿದ್ದರು.
ನಂದಳಿಕೆ ಕುಣಿತ ಭಜನಾ ಸಪ್ತಾಹ ತರಬೇತಿ ಕಾರ್ಯಕ್ರಮ















































































