ಉಡುಪಿ: ಉಕ್ರೇನ್ ನಲ್ಲಿ ರಷ್ಯಾ ಸೇನೆಯ ದಾಳಿ ಮುಂದುವರೆದಿದ್ದು, ಉಕ್ರೇನ್ ನಲ್ಲಿ ಉಡುಪಿ ಜಿಲ್ಲೆಗೆ ಸೇರಿದ 7 ಮಂದಿ ವಿದಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳು ಇನ್ನು ಬಂಕರ್ಗಳಲ್ಲಿದ್ದು, ರಾಯಭಾರ ಕಛೇರಿಯ ಸೂಚನೆಗಾಗಿ ಕಾಯುತ್ತಿದ್ದಾರೆ.
ಉಕ್ರೇನಿನ ಟೌನ್ ನೇಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಕಲಿಯುತ್ತಿರುವ ಕೆಮ್ಮಣ್ಣಿನ ಯುವಕ ಗ್ಲೆನ್ವಿಲ್ ಫೆರ್ನಾಂಡಿಸ್(19) ಹಾಸ್ಟಲ್ ಸಮೀಪದ ಬಂಕರ್ನಲ್ಲಿದ್ದು, ಖಾಕ್ರೀವ್ ನೇಶನಲ್ ಮೆಡಿಕಲ್ ಯುನಿವರ್ಸಿಟಿ ವಿದ್ಯಾರ್ಥಿನಿ ಕಲ್ಯಾಣಪುರದ ಅನಿಫ್ರೆಡ್ ರಿಡ್ಲೆ ಡಿಸೋಜಾ(20) ಹಾಸ್ಟೆಲ್ ಬಂಕರ್‌ನಲ್ಲಿದ್ದಾರೆ ಎಂದು ಜಿಲ್ಲಾಡಳಿತದ ಮಾಹಿತಿ ತಿಳಿಸಿದೆ.
7 ಮಂದಿಯ ಪೈಕಿ ಪರ್ಕಳ ಮೂಲದ ನಿಯಮ್ ರಾಘವೇಂದ್ರ(20) ರೊಮೇನಿಯಾ ತಲುಪಿದ್ದು, ಬುಕಾರೆಸ್ಟ್ ನಿಂದ ದೆಹಲಿಗೆ ಆಗಮಿಸುವ ನಿರೀಕ್ಷೆಯಲ್ಲಿದ್ದು, ಖಾಕ್ರೀವ್ ನ ಎಂಬಿಬಿಎಸ್ ವಿದ್ಯಾರ್ಥಿ ಬ್ರಹ್ಮಾವರದ ರೋಹನ್ ಬಗ್ಲಿ ಹಂಗೇರಿಯ ಬುಡಾಪೆಸ್ಟ್ ವಿಮಾನ ನಿಲ್ದಾಣಕ್ಕೆ ತಲುಪಲಿದ್ದು, ಇನ್ನೆರಡು ದಿನದೊಳಗೆ ದೆಹಲಿಗೆ ತಲುಪುವ ನಿರೀಕ್ಷೆಯಿದೆ. ತ್ರಾಸಿಯ ಅಂಕಿನ ಜಗದೀಶ್ ಪೂಜಾರಿ ಲೈವಿ ಮೂಲಕ ಪೋಲೇಂಡ್ ಗೆ ತೆರಳಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಮಾಹಿತಿ ದೊರಕಿದೆ.
ಉದ್ಯಾವರದ ಮೃಣಾಲ್ ಮನೆ ತಲುಪಿದ್ದು, ಉಡುಪಿಯ ನಂದಿನಿ ಅರುಣ್ ಮಸ್ಕತ್ ನಲ್ಲಿರುವ ತಂದೆಯ ಮನೆಗೆ ತಲುಪಿದ್ದಾರೆ.
ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿರುವ ಉಡುಪಿಯ ವಿದ್ಯಾರ್ಥಿಗಳು
Recent Comments
ಕಗ್ಗದ ಸಂದೇಶ
on