ಅಪರಾಧ-ಅಪಘಾತ ಸುದ್ದಿ

ಅನಾರೋಗ್ಯಕ್ಕೀಡಾಗಿ ಮಹಿಳೆ ಸಾವು
ಕಾರ್ಕಳ : ಅನಾರೋಗ್ಯದಿಂದ ಬಳಲುತ್ತಿದ್ದ ಈದು ಗ್ರಾಮದ ತಾರೆದಡ್ಡುವಿನ ಮಮತಾ ಶ್ರೀ (34) ಎಂಬವರು ಮಾ. 1ರಂದು ಸಾವಿಗೀಡಾಗಿದ್ದಾರೆ. ಮಧುಮೇಹ, ರಕ್ತದೊತ್ತಡ, ವಾತ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಮಮತಾ ಶ್ರೀ ಅವರನ್ನು ಮೂಡಬಿದ್ರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಾ. 1ರಂದು ಕೊನೆಯುಸಿರೆಳೆದರು. ಮಮತಾ ಶ್ರೀ ಗಂಡ ಮೃತಪಟ್ಟ ಬಳಿಕ ತಂಗಿ ಅನಿತಾಶ್ರೀ ಅವರೊಂದಿಗೆ ವಾಸವಾಗಿದ್ದರು. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಡಾರು : ವ್ಯಕ್ತಿ ಆತ್ಮಹತ್ಯೆ
ಅಜೆಕಾರು : ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕು ಅಂಡಾರು ಎಂಬಲ್ಲಿಂದ ವರದಿಯಾಗಿದೆ. ಅಂಡಾರು ರಾಮಗುಡ್ಡೆಯ ನಿವಾಸಿ ಭೋಜ ಶೆಟ್ಟಿ ಎಂಬವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ ೭-೮ ವರ್ಷಗಳಿಂದ ಅಸ್ತಮಾ, ಟಿ.ಬಿ. ಖಾಯಿಲೆಯಿಂದ ಬಳಲುತ್ತಿದ್ದ ಅವರು ಮದ್ಯವ್ಯಸನಿಯಾಗಿದ್ದರು. ಈ ಕುರಿತು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಟ್ಟೆ : ವ್ಯಕ್ತಿ ನಾಪತ್ತೆ
ನಿಟ್ಟೆ : ನಿಟ್ಟೆ ಗ್ರಾಮದ ಪರನೀರುಪಾದೆ ನಿವಾಸಿ ರವಿಕಿರಣ್‌ (35) ಫೆ. 16ರಿಂದ ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರಿನ ಗಾಲಿಯಲ್ಲಿರುವ ತನ್ನ ತಂದೆ ತಾಯಿ ಮನೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋದ ವ್ಯಕ್ತಿ ನಾಪತ್ತೆಯಾಗಿರುವುದಾಗಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿ : ವೃದ್ಧೆ ಆತ್ಮಹತ್ಯೆ
ಹೆಬ್ರಿ : ಬೆನ್ನುನೋವಿನಿಂದ ಬಳಲುತ್ತಿದ್ದ ಹೆಬ್ರಿ ಗ್ರಾಮದ ಹೊಸೂರಿನ ಅಪ್ಪಿ ಪೂಜಾರ್ತಿ (78) ಬುಧವಾರ ಬಚ್ಚಲು ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬೆನ್ನುನೋವು ಗುಣಮುಖವಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























































error: Content is protected !!
Scroll to Top