ಕಾರ್ಕಳ : ಸಾಣೂರು ಪ್ರಕೃತಿ ಶಿಕ್ಷಣ ಸಂಸ್ಥೆಯಲ್ಲಿ ಫೆ. 6ರಂದು ನಡೆದ ಅಂತರ್ ಶಾಲಾ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಾದ ಸಿಂಧು, ರಕ್ಷಿತಾ ಭಾವಿ, ಶ್ರೀಲಕ್ಷ್ಮೀ, ಎಸ್. ಧನ್ಯಾ, ಅನನ್ಯಾ ಇವರು ದ್ವಿತೀಯ ಬಹುಮಾನ ಪಡೆದರು. ಬಹುಮಾನದೊಂದಿಗೆ ರೂ. 7,000 ನಗದು, ಪ್ರಶಸ್ತಿ, ಬೆಳ್ಳಿ ಪದಕಗಳನ್ನು ಸ್ವೀಕರಿಸಿದರು. ಪ್ರಕೃತಿ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಕ್ರ್ರಿಸ್ಟಿನ್ ಜೆರಾಲ್ಡ್ ಕ್ರಾಸ್ತಾ, ಡಿವೈಎಸ್‌ಪಿ ವಿಜಯ ಪ್ರಸಾದ್ ವಿಜೇತರಿಗೆ ಬಹುಮಾನ ವಿತರಿಸಿದರು.
ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಪೆರ್ವಾಜೆ ಶಾಲೆಗೆ ಹಲವು ಪ್ರಶಸ್ತಿ









































