Wednesday, July 6, 2022
spot_img
Homeಸುದ್ದಿನಿಟ್ಟೆ ಕಾಲೇಜಿನ ರಘುನಂದನ್ ಅವರಿಗೆ ಡಾಕ್ಟರೇಟ್

ನಿಟ್ಟೆ ಕಾಲೇಜಿನ ರಘುನಂದನ್ ಅವರಿಗೆ ಡಾಕ್ಟರೇಟ್

ಕಾರ್ಕಳ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ಇಂಜಿನಿಯರಿಂಗ್ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿರುವ ರಘುನಂದನ್ ಕೆ.ಆರ್. ಅವರು ಮಂಡಿಸಿದ ಪಬ್ಲಿಕ್ ಕೀ ಕ್ರಿಪ್ಟೋಗ್ರಫಿ ಫಾರ್ ಎಫೀಷಿಯಂಟ್ ಟೈಂ ಕಾಂಪ್ಲೆಕ್ಸಿಟಿ ಆಂಡ್ ರೋಬಸ್ಟ್ನೆಸ್ ಯೂಸಿಂಗ್ ನೋವೆಲ್ ಟೆಕ್ನೀಕ್ಸ್ (Public Key Cryptography For efficient Time Complexity & Robustness using Novel Techniques) ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯು ಡಾಕ್ಟರ್ ಆಫ್ ಫಿಲಾಸಫಿ (PhD) ಪದವಿಯನ್ನು ಘೋಷಿಸಿದೆ. ಎಸ್.ಎಂ.ವಿ.ಐ.ಟಿ ಕಾಲೇಜಿನ ಉಪಪ್ರಾಂಶುಪಾಲ ಡಾ. ಗಣೇಶ್ ಐತಾಳ್ ಮತ್ತು ನಿಟ್ಟೆಯ ಎಂ.ಸಿ.ಎ. ವಿಭಾಗದ ಮುಖ್ಯಸ್ಥ ಡಾ. ಸುರೇಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ರಘುನಂದನ್‌ ಪ್ರಬಂಧ ಮಂಡಿಸಿದ್ದರು. ಇವರು ದಿ. ರಮೇಶ್ ರಾವ್ ಮತ್ತು ಲಲಿತಾ ರಾವ್ ಬೀದೀಮನೆ ಇವರ ಪುತ್ರ.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!