ಕಾರ್ಕಳ : ಮಿಯ್ಯಾರು ಗ್ರಾಮದ ಕಾರೋಲ್‌ಗುಡ್ಡೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕಾರೋಲ್‌ಗುಡ್ಡೆಯ ಮೈಕಲ್ ಕೊರೆಯ ಎಂಬಾತನನ್ನು ಕಾರ್ಕಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇ 18ರಂದು ಕಾರ್ಕಳ ನಗರ ಠಾಣೆ ಎಸ್‌ಐ ಮಧು ಬಿ.ಇ. ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಈ ವೇಳೆ ಆತನಲ್ಲಿದ್ದ 180 ಎಮ್‌ಎಲ್ ನ ಒಟ್ಟು 17 ಮದ್ಯ ತುಂಬಿದ ಸ್ಯಾಚೆಟ್ ಹಾಗೂ ಮದ್ಯ ಮಾರಾಟದಿಂದ ದೊರೆತ 3,200 ರೂ. ವಶಪಡಿಸಿಕೊಂಡಿರುತ್ತಾರೆ.
ಮಿಯ್ಯಾರು : ಅಕ್ರಮ ಮದ್ಯ ಮಾರಾಟ- ಆರೋಪಿ ವಶಕ್ಕೆ






























































