ಕಾರ್ಕಳ : ಕಾರ್ಕಳ ತಾಲೂಕಿನಾದ್ಯಂತ ಶನಿವಾರ ಮಧ್ಯಾಹ್ನ ಭಾರಿ ಗಾಳಿಮಳೆಯಾಗಿದೆ. ಮಧ್ಯಾಹ್ನ 3 ಗಂಟೆ ವೇಳೆ ಮಳೆ ಸುರಿಯಲು ಸಿಡಿಲು, ಮಿಂಚಿನ ಆರ್ಭಟ ಪ್ರಾರಂಭವಾಗಿದ್ದು, ಬಳಿಕ ಗಾಳಿ ಮಳೆಯಾಗಿದೆ.

ಕಾರ್ಕಳ ಗ್ರಾಮೀಣ ಪ್ರದೇಶವಾದ ಮುಡಾರು, ಕೆರ್ವಾಶೆ, ರೆಂಜಾಳದಲ್ಲಿ ಭಾರಿ ಮಳೆಯಾಗಿದ್ದರೆ, ನಿಟ್ಟೆ, ಮಾಳದಲ್ಲಿ ತುಂತುರು ಮಳೆಯಾಗಿದೆ. ಹೆಬ್ರಿ, ಬೆಳ್ಮಣ್ ಪ್ರದೇಶದಲ್ಲಿ ಗಾಳಿ ಮಾತ್ರ ಬೀಸಿದ್ದು, ಮಳೆಯಾಗಿಲ್ಲ. ತಾಲೂಕಿನಾದ್ಯಂತ ಬೀಸಿದ ಗಾಳಿಗೆ ವಿವಿಧೆಡೆ ಮರಗಳು ಧರಾಶಾಯಿಯಾಗಿದೆ. ಅಡಿಕೆ ಮರಗಳು ನೆಲಕ್ಕುರುಳಿದೆ. ಕೆರ್ವಾಶೆ ಮೊದಲಾದೆಡೆ ರಸ್ತೆಗೆ ಮರ ಅಡ್ಡ ಬಿದ್ದು, ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ವಿವಿಧೆಡೆ ವಿದ್ಯುತ್ ತಂತಿಗಳಿಗೆ ಮರದ ಕೊಂಬೆ ಬಿದ್ದು ಹಾನಿಯಾದ ಕುರಿತು ವರದಿಯಾಗಿದೆ.

ಅರ್ಜುನ್, ಕಾರ್ಕಳ





























