ಕಾರ್ಕಳ : 15 ವರ್ಷದ ಬಾಲಕಿಗೆ ಯುವಕನೋರ್ವ ಮರ್ಮಾಂಗ ತೋರಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಕಾರ್ಕಳ ತಾಲೂಕು ಮುಡಾರು ಗ್ರಾಮದ ದಿಡಿಂಬಿರಿ ಬಳಿ ಎ. 6ರಂದು ಸಂಜೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ನಾರಾವಿಯ ಅಬೂಬಕ್ಕರ್ ಸಿದ್ದಿಕ್ ಎಂಬಾತನು ತನ್ನ ಪ್ಯಾಂಟ್ ಜಿಪ್ ತೆಗೆದು ಖಾಸಗಿ ಅಂಗ ತೋರಿಸಿ, ಲೈಂಗಿಕ ಕಿರುಕುಳ ನೀಡಿರುವ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬಾಲಕಿಗೆ ಸಿದ್ದಿಕ್ ಬೆದರಿಕೆಯೊಡ್ಡಿದ್ದು, ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿದ್ದಾರೆ.
ಬಜಗೋಳಿ : ಬಾಲಕಿಗೆ ಖಾಸಗಿ ಅಂಗ ತೋರಿಸಿ ಪೊಲೀಸರ ಅತಿಥಿಯಾದ ಭೂಪ



























