ಕಾರ್ಕಳ : ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಮೇಶ್ವರ ರಸ್ತೆ ಬಳಿ ಕಾರು (KA 26 M 1564) ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿಗಾಹುತಿಯಾಗಿದ ಘಟನೆ ಮಾ. 16ರಂದು ನಡೆದಿದೆ.
ತಕ್ಷಣವೇ ಕಾರ್ಕಳ ಅಗ್ನಿಶಾಮಕ ಠಾಣೆಗೆ ಮಾಹಿತಿ ದೊರೆತಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಪ್ರವೃತ್ತಗೊಂಡು ಬೆಂಕಿ ನಂದಿಸಿದರು. ಕಾರು ಹಾವೇರಿ ಮೂಲದ ರಮೇಶ್ ಎಂಬವರದ್ದಾಗಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ. ಸಂಜೀವ , ದಫೆದಾರ್ ರೂಪೇಶ್, ಜಯ ಮೂಲ್ಯ, ಮನೋಹರ್ ಪ್ರಸಾದ್, ನಿತ್ಯಾನಂದ, ಸುಜಯ ಭಾಗವಹಿಸಿದ್ದರು.































































