ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಬದಲು ಸ್ಯಾನಿಟೈಸರ್ ಹನಿಗಳನ್ನು ಹಾಕಲಾಗಿದೆ.
ಸಿಬ್ಬಂದಿ ನಿರ್ಲಕ್ಷ್ಯದಿಂದ ಪೋಲಿಯೋ ಹನಿಗಳ ಬದಲು ಸ್ಯಾನಿಟೈಸರ್ ಹನಿಗಳನ್ನು ಮಕ್ಕಳ ಬಾಯಿಕೆ ಹಾಕಲಾಗಿದೆ.
ಸ್ಯಾನಿಟೈಸರ್ ಹಾಕಿದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಪ್ಸಿಕೊಪ್ರಿ ಗ್ರಾಮ ಭನ್ಬೋರಾ ಆರೋಗ್ಯ ಕೇಂದ್ರದಲ್ಲಿ ಪೋಲಿಯೋ ವ್ಯಾಕ್ಸಿನೇಶನ್ ನಡೆಯುತ್ತಿದ್ದ ವೇಳೆ ಈ ಅನಾಹುತ ಸಂಭವಿಸಿದೆ. 12 ಮಕ್ಕಳಲ್ಲಿ ಒಂದು ಮಗುವಿಗೆ ವಾಂತಿಯಾಗಿದ್ದು, ಎಲ್ಲ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಪೋಲಿಯೋ ಲಸಿಕೆ ಬದಲು ಸ್ಯಾನಿಟೈಸರ್ ಹನಿ ಹಾಕಿದ ಸಿಬ್ಬಂದಿ!






























































