ಟ್ರಾವೆಲ್ ಏಜೆನ್ಸಿಯಿಂದ ವಂಚನೆ: ಇಂಡೋನೇಷ್ಯಾದಲ್ಲಿ ಜೈಲು ಶಿಕ್ಷೆ ಅನುಭವಿಸಿದ ಮಂಗಳೂರು ಯುವಕ

ಮಂಗಳೂರು: ದಕ್ಷಿಣ ಕೊರಿಯಾದಲ್ಲಿ ಉದ್ಯೋಗ ಹುಡುಕುತ್ತಿದ್ದ ಉಳ್ಳಾಲ್ ನ ಯುವಕನೋರ್ವ ಇತ್ತೀಚಿಗೆ ಟ್ರಾವೆಲ್ ಏಜೆನ್ಸಿ ವೊಂದರಿಂದ ಮೋಸ ಹೋಗಿದ್ದು, 6 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಡಿಪ್ಲೋಮಾ ಪದವೀಧರರಾಗಿರುವ ಯುವಕ ಮೊಹಮ್ಮದ್ ನಿಯಾಜ್, ಟ್ರಾವೆಲ್ ಏಜೆನ್ಸಿಯ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ದೊಡ್ಡ ಪ್ರಮಾಣದಲ್ಲಿ ಹಣ ಪಡೆದು ವಂಚಿಸಿದ್ದಾರೆ ಎಂದು ಅವರು  ಆರೋಪಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರಲ್ಲಿ ದೂರು ದಾಖಲಾಗಿದ್ದು,  ಬಂದೂರಿನ ಮಂಗಳೂರು ಟೂರ್ಸ್ ಮತ್ತು ಟ್ರಾವೆಲ್ಸ್ ಮಾಲೀಕ ಶಮ್ಶೀರ್ ರಿಜ್ವಾನ್, ತಮ್ಮಿಂದ 6 ಲಕ್ಷ ರೂಪಾಯಿ ಪಡೆದುಕೊಂಡಿರುವುದಾಗಿ ಸಂತ್ರಸ್ತ ಆರೋಪಿಸಿದ್ದಾನೆ. ಜಿಲ್ಲೆಯ ಇತರ ಮೂವರು ಯುವಕರೊಂದಿಗೆ ತಮ್ಮ ಮಗನನ್ನು ಇಂಡೋನೇಷ್ಯಾದ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಉಳಿಯುವಂತೆ ಮಾಡಲಾಗಿತ್ತು ಎಂದು ನಿಯಾಜ್ ತಂದೆ ಅಬ್ದುಲ್ ಅಜೀಜ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ತಮ್ಮ ಮಗನಿಗೆ ಉದ್ಯೋಗ ಕೊಡಿಸುವುದಾಗಿ ಎಲ್ಲಾ ದಾಖಲಾತಿಗಳನ್ನು ಪಡೆದುಕೊಂಡ ಶಮ್ಶೀರ್, ವೀಸಾಗೆಂದು 6 ಲಕ್ಷ ಕೇಳಿದ್ದಾನೆ. ಆರು ಲಕ್ಷ ಕೊಟ್ಟರೆ ದಕ್ಷಿಣ ಕೊರಿಯಾದಲ್ಲಿ ಮಾನ್ಯತೆ ಪಡೆದ ಕಂಪನಿಯೊಂದಿಗೆ 2 ಲಕ್ಷ ಸಂಬಳದೊಂದಿಗೆ ಮೆಕ್ಯಾನಿಕಲ್ ಎಂಜಿನಿಯರ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಸಂದರ್ಶಕರ ವೀಸಾ ಆಧಾರದ ಮೇಲೆ ಇಂಡೋನೇಷ್ಯಾಕ್ಕೆ ಕರೆದುಕೊಂಡು ಹೋಗಿದ್ದ. ಆತನ ಮೇಲೆ ನಂಬಿಕೆ ಇಟ್ಟು ಜುಲೈ 2019ರಲ್ಲಿ 3 ಲಕ್ಷದ 50 ಸಾವಿರ ಹಾಗೂ  ಫೆಬ್ರವರಿ 2020ರಲ್ಲಿ 2.50 ಲಕ್ಷ ನೀಡಿದ್ದಾಗಿ ಅಬ್ದುಲ್ ಅಜೀಜ್ ಹೇಳಿದ್ದಾರೆ.

ಫೆಬ್ರವರಿಯಿಂದ ಸೆಪ್ಟೆಂಬರ್ 2020ರವರೆಗೂ ಮಂಗಳೂರು ಇತರ ಮೂವರು ಯುವಕರು ರೂಮ್ ನಲ್ಲಿದ್ದೇವು. ಸೆಪ್ಟೆಂಬರ್ ನಲ್ಲಿ ವಲಸೆ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿ ಅಕ್ರಮ ವಾಸ್ತವ್ಯ ಆರೋಪದ ಮೇರೆಗೆ 14 ದಿನಗಳ ಕಾಲ ಜೈಲಿನಲ್ಲಿ ಉಳಿಯಬೇಕಾಯಿತು. ಆದಾಗ್ಯೂ. ಕಾನೂನು ಹೋರಾಟದ ನಂತರ ಬಿಡುಗಡೆಯಾಗಿದ್ದಾಗಿ ನಿಯಾಜ್ ಹೇಳಿಕೊಂಡಿದ್ದಾರೆ.

ಮಂಗಳೂರಿಗೆ ವಾಪಸ್ಸಾಗಲು ತಮ್ಮ ತಂದೆ 8 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಶಮ್ಶೀರ್ ರಿಜ್ವಾನ್, ಉದ್ಯೋಗಕಾಂಕ್ಷಿಗಳಿಂದ ಸಂಗ್ರಹಿಸಿದ ಹಣವನ್ನು ಇಂಡೋನೇಷ್ಯಾದಲ್ಲಿ ಟ್ರಾವೆಲ್ ಏಜೆಂಟ್ ಅವರೊಂದಿಗೆ ಹಂಚಿಕೊಳ್ಳುತ್ತಿದ್ದ. ಈ ವರ್ಷದ ಜನವರಿ 21 ರಂದು ಉಳ್ಳಾಲ್ ನಲ್ಲಿ ಆತನನ್ನು ಭೇಟಿಯಾದಾಗ ಕೇವಲ 2 ಲಕ್ಷ ಹಿಂದಿರುಗಿಸುವುದಾಗಿ ಭರವಸೆ ನೀಡಿರುವುದಾಗಿ ನಿಯಾಜ್ ತಿಳಿಸಿದರು.









































































































error: Content is protected !!
Scroll to Top