ಸೋಲಾರ್‌ ಘಟಕ ಹಸ್ತಾಂತರ

ಕಾರ್ಕಳ : ರೋಟರಿ ಆನ್ಸ್ ಕ್ಲಬ್ ಮತ್ತು ಯುವವಾಹಿನಿ ಘಟಕ ಕಾರ್ಕಳ ಇದರ ವತಿಯಿಂದ ಕರುಣಾಳು ಬಾ ಬೆಳಕು ಕಾರ್ಯಕ್ರಮದಡಿಯಲ್ಲಿ ಗುರುವಾರ 21ನೇ ಮನೆಗೆ ಸೋಲಾರ್ ಘಟಕದ ವ್ಯವಸ್ಥೆ ಕಲ್ಪಿಸಲಾಯಿತು. ಸೋಲಾರ್‌ ದೀಪದ ಪ್ರಾಯೋಜಕಿ ತಾಲೂಕು ಬಂಟ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸವಿತಾ ಶೆಟ್ಟಿ ಸೋಲಾರ್ ದೀಪವನ್ನು ಬೆಳಗಿಸಿದರು. ಬಂಟ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಸುನೀತಾ ಮತ್ತು ಯುವವಾಹಿನಿ ಅಧ್ಯಕ್ಷ ಗಣೇಶ್ ಸಾಲಿಯಾನ್, ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್, ಸದ್ಭವನ ನಗರದ ಕೌನ್ಸಿಲರ್ ನೀತಾ ಮತ್ತು ಸುರೇಂದ್ರ, ಅಶೋಕ್ ಸುವರ್ಣ, ಯುವವಾಹಿನಿ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು









































































































error: Content is protected !!
Scroll to Top