ಕಾರ್ಕಳ : ಅತ್ಯಾಚಾರ-ಜೀವ ಬೆದರಿಕೆ ಕೇಸು ದಾಖಲು

ಕಾರ್ಕಳ : ಉಪ್ಪಿನಂಗಡಿ ನಿವಾಸಿ ಪ್ರಾಣೇಶ ಎಂಬಾತನು ತನ್ನನ್ನು ಅತ್ಯಾಚಾರಗೈದು ಜೀವ ಬೆದರಿಕೆಯೊಡ್ಡಿರುವುದಾಗಿ ಕಾರ್ಕಳದ ಯುವತಿಯೋರ್ವಳು ಜ. 20ರಂದು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾಳೆ. 2020 ನೇ ಜನವರಿಯಲ್ಲಿ ಕಾರ್ಕಳ ಎಂಪಿಎಂ ಕಾಲೇಜಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿರುವ ಸಂದರ್ಭ ತನ್ನ ದೊಡ್ಡಪ್ಪನ ಪರಿಚಯದ ಪ್ರಾಣೇಶ ಎಂಬಾತನು ಕಾಲೇಜಿಗೆ ಬಿಡುವುದಾಗಿ ತಿಳಿಸಿ, ಪುಸಲಾಯಿಸಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಎಂಪಿಎಂ ಕಾಲೇಜು ಸಮೀಪ ನಿಲ್ಲಿಸದೇ ನೇರವಾಗಿ ಉಪ್ಪಿನಂಗಡಿಯ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಹೋಗಿರುತ್ತಾನೆ. ಕಾರಿನಲ್ಲೇ ಮತ್ತು ಭರಿಸುವ ಲೆಮನ್ ಜ್ಯೂಸ್ ನೀಡಿ ಉಪ್ಪಿನಂಗಡಿಯ ಬಂದಾರು ಎಂಬಲ್ಲಿರುವ ಒಂದು ಹೆಂಚು ಛಾವಣಿಯ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿರುತ್ತಾನೆ. ಅಲ್ಲದೇ ಈ ದೃಶ್ಯಾವಳಿ ವಿಡಿಯೋ ಚಿತ್ರಿಕರಣ, ನಗ್ನಾವಸ್ಥೆಯ ಛಾಯಾಚಿತ್ರಗಳಿದ್ದು, ಘಟನೆಯ ಕುರಿತು ಯಾರಿಗಾದರೂ ತಿಳಿಸಿದರೆ ವಿಡಿಯೋ ಪ್ರಸಾರ ಮಾಡಿ ಮಾನ ಹರಾಜು ಹಾಕುತ್ತೇನೆ. ಇಲ್ಲವಾದಲ್ಲಿ ಕೊಂದು ಬಿಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿರುತ್ತಾಳೆ.

ಬೈಲೂರಿಗೆ ಬರುವಂತೆ ಬೆದರಿಕೆ
ಇತ್ತೀಚಿನ ದಿನಗಳಲ್ಲಿ ಪೋನ್ ಕರೆ ಮಾಡಿ ಕರೆದಲ್ಲಿಗೆ ಬರುವಂತೆ ತಿಳಿಸುತ್ತಿದ್ದು ಬಾರದೇ ಇದ್ದಲ್ಲಿ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆಯೊಡ್ಡುತ್ತಿರುತ್ತಾನೆ. ಇದೇ ತಿಂಗಳ 12ರಂದು ಕಾರ್ಕಳಕ್ಕೆ ಕಂಪ್ಯೂಟರ್ ಕ್ಲಾಸಿಗೆ ಬಂದ ಸಮಯ ತನ್ನನ್ನು ಬೈಲೂರಿಗೆ ಬರುವಂತೆ ಬೆದರಿಸಿದ್ದು, ತಾನು ಹೆದರಿ ಬೈಲೂರಿಗೆ ಹೋದಾಗ ಮೋಟಾರು ಸೈಕಲ್‌ನಲ್ಲಿ ಕುಳ್ಳಿರಿಸಿಕೊಂಡು ಆತನ ದಣಿಯ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

































































































error: Content is protected !!
Scroll to Top