ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ವ್ಯಕ್ತಿಯಿಂದ ಕಿರುಕುಳ – ಪೊಲೀಸರೆದುರೇ ಆರೋಪಿಗೆ ಕಪಾಳ ಮೋಕ್ಷ ಮಾಡಿದ ಯುವತಿ

ಮಂಗಳೂರು : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಪಕ್ಕದಲ್ಲಿ ಕುಳಿತಿದ್ದ ಯುವಕ ಕಿರುಕುಳ ನೀಡಿ ಇನ್‌ಸ್ಟ್ಯಾ ಗ್ರಾಮ್‌ನಲ್ಲಿ ವೈರಲ್‌ ಆಗಿದ್ದ ಕಾಮುಕನನ್ನು ಮಂಗಳೂರು ನಗರ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಯನ್ನು ಕಾಸರಗೋಡು ನಿವಾಸಿ ಹುಸೇನ್‌ (41) ಎಂದು ಗುರುತಿಸಲಾಗಿದೆ.

ಕಪಾಳಮೋಕ್ಷ
ಆರೋಪಿಯ ಕುರಿತು ಮಾಹಿತಿ ನೀಡುವ ಸಲುವಾಗಿ ಪೊಲೀಸ್‌ ಕಮಿಷನರ್‌ ಗುರುವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಆರೋಪಿಯನ್ನು ಮಾಧ್ಯಮದವರ ಮುಂದೆ ಕರೆತರಲಾಗಿದ್ದು, ಈ ವೇಳೆ ಅಲ್ಲಿಯೇ ಇದ್ದ ಯುವತಿ ಆರೋಪಿಯನ್ನು ಕಂಡೊಡನೆ ಪೊಲೀಸರ ಮುಂದೆಯೇ ಕಪಾಳಮೋಕ್ಷ ಮಾಡಿರುತ್ತಾರೆ.































































































error: Content is protected !!
Scroll to Top