ಗ್ರಾಹಕರೇ ಬ್ಯಾಂಕಿನ ನಿಜವಾದ ಆಸ್ತಿ-ರಾಜಕಿರಣ ರೈ

ಕಾರ್ಕಳ : ಗ್ರಾಹಕರೇ ಬ್ಯಾಂಕಿನ ನಿಜವಾದ ಸಂಪತ್ತು. ಗ್ರಾಹಕರ ಸತತ ಪ್ರೋತ್ಸಾಹದಿಂದಲೇ ಆಯಾ ಪ್ರದೇಶದ ಆರ್ಥಿಕ ಚಟುವಟಿಕೆಗಳು ಚೈತನ್ಯದಾಯಿಯೆನಿಸಿವೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ನಿರ್ದೇಶಕ ಕಾಗೂ ಕಾರ್ಯನಿರ್ವಹಣಾಧಿಕಾರಿ ರಾಜಕಿರಣ ರೈ ಜಿ. ಹೇಳಿದರು.
ಅವರು ಮಾರುತಿ ದೇವಸ್ಥಾನದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ ಕಾರ್ಪೋರೇಷನ್ ಬ್ಯಾಂಕ್ (ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ)ದ ಗ್ರಾಹಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಇತ್ತೀಚೆಗೆ ಬ್ಯಾಂಕಿನ ವಿಲೀನ ಗ್ರಾಹಕರಲ್ಲಿ ಅಲ್ಪಮಟ್ಟಿಗೆ ಕಸಿವಿಸಿಯನ್ನುಂಟು ಮಾಡಿರಬಹುದು. ಹಿಂದಿದ್ದ ಕಾರ್ಪೋರೇಷನ್ ಬ್ಯಾಂಕ್ ಸರಕಾರದ ನಿಯಮದಂತೆ ಇದೀಗ ಯೂನಿಯನ್ ಬ್ಯಾಂಕ್‍ನ ಜೊತೆ ವಿಲೀನಗೊಂಡಿದೆ. ಬದಲಾಗುವ ಬ್ಯಾಂಕಿನ ಆರ್ಥಿಕ ಚಟುವಟಿಕೆಗಳಿಗೆ ಕಾರ್ಕಳದ ಗ್ರಾಹಕರು ಸದಾ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಮುಂದಿನ ಮಾರ್ಚ್‍ ತರುವಾಯ ಪೂರ್ಣವಾಗಿ ಯೂನಿಯನ್ ಬ್ಯಾಂಕ್‍ನ ಸೇವೆ ಗ್ರಾಹಕರಿಗೆ ಲಭಿಸಲಿದ್ದು, ಗ್ರಾಹಕರ ಸೇವೆಯಲ್ಲಿ ಬ್ಯಾಂಕ್ ಹಿಂದೆ ಉಳಿಯದು. ಎಂದಿನಂತೆ ಬ್ಯಾಂಕಿನ ಎಲ್ಲ ಸೇವೆಗಳು ಗ್ರಾಹಕರಿಗೆ ಮುಂದುವರಿಯಲಿವೆ ಎಂದರು. ಬೋಳ ಪ್ರಭಾಕರ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ವೆಂಕಟರಮಣ ದೇವಸ್ಥಾನದ ಅನಿಲ್ ಜೋಶಿ, ರವೀಂದ್ರ ಪುರಾಣಿಕ್ ಹಾಗೂ ವಿಶ್ವನಾಥ ತಂತ್ರಿ, ಬ್ಯಾಂಕಿನ ಪ್ರಬಂಧಕ ಗೋಪಿನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೋರ್ಕಟ್ಟೆ ಗಣಪತಿ ಹೆಗ್ಡೆ ಸ್ವಾಗತಿಸಿ, ಬ್ಯಾಂಕಿನ ಉಡುಪಿ ವಲಯ ಮುಖ್ಯಸ್ಥ ಡಾ. ವಾಸಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

































































































error: Content is protected !!
Scroll to Top