ಪ್ರಚೋದನಕಾರಿ “ಉಗ್ರ” ಗೋಡೆಬರಹ : ಓರ್ವ ಶಂಕಿತ ಸೆರೆ

ಮಂಗಳೂರು, ಡಿ.3: ಮಂಗಳೂರು ನಗರದಲ್ಲಿ ಕೆಲ ದಿನಗಳ ಹಿಂದೆ ಉಗ್ರರನ್ನು ಬೆಂಬಲಿಸುವ ಗೋಡೆಬರಗಳನ್ನು ಬರೆದು ಆತಂಕ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯಾದ್ಯಂತ ಸುದ್ದಿಯಾಗಿದ್ದ ಈ ಉಗ್ರ ಪರವಾದ ಗೋಡೆಬರಹಗಳು ಪೊಲೀಸರ ಪಾಲಿಗೆ ಒಂದು ಸವಾಲಾಗಿತ್ತು. ಪರಿಸರದಲ್ಲಿದ್ದ ಸಿಸಿಟಿವಿಗಳಲ್ಲಿ ಅಸ್ಪಷ್ಟ ದೃಶ್ಯಗಳು ಮೂಡಿದ ಕಾರಣ ಆರೋಪಿಗಳ ಜಾಡು ತಿಳಿಯುವುದು ಕಷ್ಟವಾಗಿತ್ತು.
ತೀರ್ಥಹಳ್ಳಿಯ ನಜೀರ್‌ ಮುಹಮ್ಮದ್‌ ಆಗಾ ಎಂಬ ಯುವಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಜೀರ್‌ ಹಾಗೂ ಇನ್ನೊಬ್ಬ ಯುವಕ ಬೈಕಿನಲ್ಲಿ ಬಂದು ಈ ಪ್ರಚೋದನಕಾರಿ ಬರಹಗಳನ್ನು ಬರೆದಿದ್ದರು ಎನ್ನಲಾಗಿದೆ. ನಜೀರ್‌ ಜೊತೆಗಿದ್ದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.











































error: Content is protected !!
Scroll to Top