ಶೀಘ್ರ ಲವ್‌ ಜೆಹಾದ್‌ ವಿರುದ್ಧ ಕಾನೂನು : ನಳಿನ್‌ ಕುಮಾರ್‌ ಕಟೀಲ್‌

ಉಡುಪಿ,ನ. 27: ಹೆಚ್ಚುತ್ತಿರುವ ಲವ್ ಜೆಹಾದ್ ವಿರುದ್ಧ ರಾಜ್ಯದಲ್ಲೂ ಕಠಿಣ ಕಾನೂನು ಜಾರಿಗೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ರಾಷ್ಟ್ರ ವಿರೋಧಿ ಘೋಷಣೆ, ಬರಹ ಕುರಿತಂತೆ ಪ್ರತಿಕ್ರಿಯಿಸಿದ ಅದನ್ನು ಯಾರೇ ಹಾಕಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಮಣಿಪಾಲದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಳಿನ್‌ ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಸಂಪುಟ ಈ ನಿಟ್ಟಿನಲ್ಲಿ ಶೀಘ್ರವೇ ತೀರ್ಮಾನ ಕೈಗೊಳ್ಳಲಿದೆ ಎಂದರು.
ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು ಕೇಂದ್ರದ ಬಿಜೆಪಿ ವರಿಷ್ಠರ ಜೊತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಮಾಲೋಚಿಸಿ ತಮ್ಮ ವಿವೇಚನೆಗೆ ಅನುಗುಣವಾಗಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಹಲವು ಸಚಿವರು ತಮ್ಮ ಇಲಾಖಾ ಯೋಜನೆ ಅಂಗೀಕಾರ, ಅನುದಾನಕ್ಕಾಗಿ ದಿಲ್ಲಿಗೆ ತೆರಳಿ ನಾಯಕರ ಭೇಟಿ ಮಾಡುತ್ತಿದ್ದು ಇದಕ್ಕೆ ಅನ್ಯ ಅರ್ಥ ಕಲ್ಪಿಸಬೇಕಿಲ್ಲ ಎಂದರು.













































error: Content is protected !!
Scroll to Top