ಚೇತನ್ ಶರ್ಮಾ ಭಾರತ ಕಂಡ ಉತ್ತಮ ವೇಗದ ಬೌಲರ್. ವಿಶ್ವಕಪ್ ತಂಡದಲ್ಲಿ ಕೂಡ ಆಡಿದವರು. ಅವರು 23 ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿ 61 ವಿಕೆಟ್ ಪಡೆದಿದ್ದಾರೆ. 65 ಏಕದಿನ ಪಂದ್ಯದಲ್ಲಿ ಆಡಿ 87 ವಿಕೆಟ್ ಹಾರಿಸಿದ್ದಾರೆ. ಒಟ್ಟು 121

ಪ್ರಥಮ ದರ್ಜೆ ಪಂದ್ಯಗಳಲ್ಲಿ 433 ವಿಕೆಟ್ ಪಡೆದು ಉತ್ತಮ ಸಾಧನೆ ಮೆರೆದಿದ್ದಾರೆ. ಅವರ ಇಕಾನಮಿ ಕೂಡ ತುಂಬಾ ಚೆನ್ನಾಗಿದೆ. ಆದರೆ ಒಂದು ಕೊನೆಯ ಬಾಲಿನ ದುರದೃಷ್ಟ ಅವರನ್ನು ಇಂದಿಗೂ ಬೆಂಬಿಡದೆ ಕಾಡುತ್ತಿದೆ. ಅವರ ಮಾತುಗಳಲ್ಲೇ ಕೇಳಿ.
“ನಾನು ನನ್ನ ಮೊದಲ ಟೆಸ್ಟ್ ಪಂದ್ಯದ ಮೊದಲ ಓವರಿನಲ್ಲಿ ವಿಕೆಟ್ ಪಡೆದೆ. ಈ ಸಾಧನೆಯನ್ನು ಮಾಡಿದ ಭಾರತದ ಕೇವಲ ನಾಲ್ಕನೇ ಬೌಲರ್ ನಾನು. 1987ರ ವಿಶ್ವಕಪ್ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದೆ. ವಿಶ್ವಕಪ್ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯ ಬೌಲರ್ ನಾನು. ಆದರೆ ಜನರು ಅದನ್ನು ಮರೆತೇ ಬಿಟ್ಟಿದ್ದಾರೆ. ಅದೇ 1986ರ ಆಸ್ಟ್ರೇಲಿಯಾ ಏಷ್ಯಾ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ಥಾನ ಫೈನಲಿಗೆ ಬಂದಿತ್ತು. ಪಾಕಿಸ್ಥಾನ ಚೇಸ್ ಮಾಡುವಾಗ ಕೊನೆಯ ಬಾಲಿನಲ್ಲಿ ನಾಲ್ಕು ರನ್ ಆಗಲೇ ಬೇಕಿತ್ತು. ಮಿಯಾಂದಾದ್ ಕೈಯ್ಯಲ್ಲಿ ಬ್ಯಾಟ್ ಇತ್ತು. ನಾನು ಎಸೆದ ಆ ಕೊನೆಯ ಬಾಲು outside the leg stump full Toss ಆಗಿಬಿಟ್ಟಿತು. ಅದಕ್ಕೆ ಮಿಯಾಂದಾದ್ ಮುಲಾಜೆ ಇಲ್ಲದೆ ಸಿಕ್ಸರ್ ಹೊಡೆದುಬಿಟ್ಟ! ಪಾಕಿಸ್ಥಾನ ಗೆದ್ದಿತು. ಭಾರತ ಸೋತಿತು. ನನ್ನ ದುರದೃಷ್ಟ! ಜನರು ನನ್ನ ಹ್ಯಾಟ್ರಿಕ್ ಮರೆತು ಬಿಟ್ಟಿದ್ದಾರೆ. ಆದರೆ ನನ್ನ ಕೊನೆಯ ಬಾಲ್ ಸಿಕ್ಸರ್ ಆದದ್ದು ಜನರು ಮರೆತೇ ಇಲ್ಲ! ” ಎಂದು ಮಾತು ನಿಟ್ಟುಸಿರುಬಿಡುತ್ತಿದ್ದಾರೆ ಚೇತನ್ ಶರ್ಮ .
ಫೋರ್ತ್ ಅಂಪಾಯರ್







































