ಕಾರ್ಕಳ, ನ.16 : ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ನಿವಾಸಿ ದೀಪಕ್ ಶೆಟ್ಟಿ (24) ಎಂಬವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನ. 13 ರಂದು ಮೂಡಬಿದ್ರಿಯ ಸ್ನೇಹಿತನನ್ನು ಭೇಟಿಯಾಗಲೆಂದು ವ್ಯಾಗನರ್ ಕಾರಿನಲ್ಲಿ ತೆರಳಿದ್ದ ದೀಪಕ್ ಬಳಿಕ ನಾಪತ್ತೆಯಾಗಿದ್ದರು. ನ. 16 ರಂದು ಅವರ ಶವ ಪತ್ತೆಯಾಗಿದ್ದು, ಆರ್ಥಿಕ ಬಿಕ್ಕಟ್ಟೇ ಆತ್ಮಹತ್ಯೆಗೆ ಕಾರಣವೆನ್ನಲಾಗುತ್ತಿದೆ. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ದೀಪಕ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.
ಕುಕ್ಕುಂದೂರಿನ ಯುವಕ ಆತ್ಮಹತ್ಯೆ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ನಷ್ಟ ಕಾರಣ?

































































