ಪಾಲಕರೇ ಜೋಪಾನ … ಆನ್ಲೈನ್ ನಲ್ಲಿ ಮಕ್ಕಳು ಹಾದಿ ತಪ್ಪದಿರಲಿ

ಆನ್ ಲೈನ್ ತರಗತಿಯಿಂದಾಗಿ ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿದೆ. ಹದಿಹರೆಯದ ವಯಸ್ಸಿನಲ್ಲಿ ಇದರ ಬಳಕೆಯಿಂದ ವಿಭಿನ್ನ ಪರಿಣಾಮಗಳು ಮನಸ್ಸಿನಲ್ಲಿ ಮೂಡುತ್ತವೆ. ಇತ್ತೀಚೆಗೆ ಪ್ರೀತಿ ಪ್ರೇಮಕ್ಕೆ ಒಳಗಾಗಿ ಮನೆ ಬಿಟ್ಟು ತೆರಳುವುದು, ಹಣಕ್ಕಾಗಿ ಅಪಹರಣದ ಕೇಸ್ ಗಳು ದಾಖಲಾಗುತ್ತಿರುವುದು ದುರಂತದ ವಿಷಯ.
ಸೋಷಿಯಲ್ ಮೀಡಿಯಾಗಳ ಆಕಷ೯ಣೆಗೆ ಸಿಕ್ಕ ಮಕ್ಕಳು ಅದರ ಸಾಧಕಬಾಧಕಗಳ ಅರಿವಿಲ್ಲದೆ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಜಾಲತಾಣದಲ್ಲಿ ತಮ್ಮ ವಿಭಿನ್ನ ಮಾದರಿಯ, ತರತರದ ಪೋಟೋವನ್ನು ಅಪಲೋಡ್ ಮಾಡಿ ವಿಡಿಯೋಗಳನ್ನು ಹರಿಬಿಟ್ಟು ಟ್ರೋಲ್ ಗೆ ಒಳಗಾಗುದನ್ನು ನಾವು ನೋಡುತ್ತಿದ್ದೇವೆ. ಇಂತಹ ಮುಗ್ಧ ಶಾಲಾ ಮಕ್ಕಳ ಹಿಂದೆ ಕೆಡುಕರ ಗ್ಯಾಂಗ್ ಬಿದ್ದಿವೆ. ಪೋನ್ ಮಾಡಿ ಹೆದರಿಸುವುದು, ಲೈಂಗಿಕ ದುಬ೯ಳಕೆ ಮುಂತಾದ ಸಮಾಜ ವಿರೋಧಿ ಕೃತ್ಯಕ್ಕೆ ಒಳಗಾಗಿ ದುಬ೯ಳಕೆಯಾಗುತ್ತಿದ್ದಾರೆ ಎಂದು ಅನೇಕ ಮಂದಿ ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಈ ರೀತಿಯ ಮಾನಸಿಕ ಹಿಂಸೆಯು ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ.ಟ್ರೋಲ್ ಗೆ ಒಳಗಾದ ಮಕ್ಕಳ ಮನಸ್ಥಿತಿಯು ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿರುತ್ತದೆ. ಭಯಾನಕ ಸನ್ನಿವೇಶಕ್ಕೆ ಹೆದರಿ ಮನೋರೋಗಕ್ಕೆ ಒಳಗಾಗಿ ಜೀವನವನ್ನೇ ಬಲಿ ಪಡೆಯುವ ಸ್ಥಿತಿಯಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪೋಷಕರು
ಪೋಷಕರು ಈ ಸಮಯದಲ್ಲಿ ತಮ್ಮ ಮಕ್ಕಳ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ.ಮಕ್ಕಳು ಮೊಬೈಲ್ ಯಾವ ರೀತಿ ಬಳಸುತ್ತಿದ್ದಾರೆ, ಆನ್ ಲೈನ್ ತರಗತಿಯಲ್ಲಿ ಪಾಠಕ್ಕೆ ಗಮನ ನೀಡುತ್ತಾರೆಯೇ ಎಂಬುದನ್ನು ಸೂಕ್ಮವಾಗಿ ಗಮನ ಹರಿಸಬೇಕು. ಪಾಠದ ವಿಷಯ ಅಲ್ಲದೆ ಬೇರೆ ಯಾವ ವಿಷಯವನ್ನು ಸಚ್೯ ಮಾಡುತ್ತಿದ್ದಾರೆ ಎಂಬುದನ್ನು ನೋಡಬೇಕು. ಯಾವುದೇ ವಿಷಯವಿದ್ದರೂ ಮಕ್ಕಳು ಸಂಕೋಚ ರಹಿತವಾಗಿ ಪೋಷಕರ ಬಳಿ ಹೇಳುವ ವಾತಾವರಣದ ನಿರ್ಮಿಸುವ ಅಗತ್ಯವಿದೆ.
ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ ಪಾಠದೊಂದಿಗೆ ಆಟ ಅದೇ ರೀತಿ ಉತ್ತಮ ಹವ್ಯಾಸ ಬೆಳೆಸುವ ಕೆಲಸವಾಗಬೇಕು. ರಜೆಯ ಕಾರಣ ಮಕ್ಕಳು ಇಡೀ ದಿನ ಮೊಬೈಲ್ ನಲ್ಲಿ ಇರದೆ ಹೊರಗಡೆ ಆಟವಾಡಲು ಬಿಡಬೇಕು.ಮಾನಸಿಕ ತಜ್ಞರ ಅಭಿಪ್ರಾಯದಂತೆ ಈ ರಜೆಯ ಅವಧಿಯಲ್ಲಿ ಮಕ್ಕಳಲ್ಲಿ ಬೊಜ್ಜು, ಆಲಸ್ಯ ಹೆಚ್ಚಾಗಿ ವ್ಯಕ್ತಿತ್ವದಲ್ಲಿ ಗಮನಾಹ೯ ಬದಲಾವಣೆಯಾಗಿದೆ.ಹೀಗಾಗಿ ಆನ್ ಲೈನ್ ಮಧ್ಯದಲ್ಲಿ ಮಕ್ಕಳ ಮನೋವಿಕಾಸ ನಡೆಯುವಂತೆ ನೋಡಬೇಕು.ಆದಷ್ಟು ಬೇಗ ಶಾಲೆ ಪ್ರಾರಂಭವಾಗಿ ಮಕ್ಕಳ ಹಳೆಯ ದಿನಗಳು ಬರಲಿ.
ರಾಘವೇಂದ್ರ ಪ್ರಭು,ಕವಾ೯ಲು















































































































































error: Content is protected !!
Scroll to Top