Wednesday, October 27, 2021
spot_img
Homeರಾಜ್ಯಉಪನ್ಯಾಸಕರೂ ಕೊರೊನ ನೆಗೆಟಿವ್‌ ಪ್ರಮಾಣಪತ್ರ ಹೊಂದಿರಬೇಕು

ಉಪನ್ಯಾಸಕರೂ ಕೊರೊನ ನೆಗೆಟಿವ್‌ ಪ್ರಮಾಣಪತ್ರ ಹೊಂದಿರಬೇಕು

ಬೆಂಗಳೂರು, ನ.15: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು ನ.17ರಿಂದ ಕೊರೊನ ಮಾರ್ಗಸೂಚಿ ಪ್ರಕಾರ ಪ್ರಾರಂಭಿಸಲು ಹೆಚ್ಚುವರಿ ಉಪ ಆಯುಕ್ತೆ ಎಂ.ಜೆ.ರೂಪಾ ನಿರ್ದೇಶನ ನೀಡಿದ್ದಾರೆ.
ಪದವಿ, ಡಿಪ್ಲೊಮ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ತೆರೆಯುವ ವಿಚಾರವಾಗಿ ನಡೆದ ಪರಾಮರ್ಶನಾ ಸಭೆಯಲ್ಲಿ ಮಾತನಾಡಿದ ರೂಪಾ ಅವರು ಶೇ.50 ವಿದ್ಯಾರ್ಥಿಗಳ ಜೊತೆಗೆ ತರಗತಿಗಳನ್ನು ನಡೆಸಬೇಕು ಹಾಗೂ ಇದೇ ವೇಳೆ ಆನ್‌ ಲೈನ್‌ ಕ್ಲಾಸ್‌ಗಳು ಕೂಡ ನಡೆಯುತ್ತಿರಬೇಕು ಎಂದು ಸೂಚಿಸಿದ್ದಾರೆ.
ವಿದ್ಯಾರ್ಥಿಗಳು ಮಾತ್ರವಲ್ಲದೆ ಉಪನ್ಯಾಸಕರು, ಸಿಬಂದಿಗಳು ಕೂಡ ಕೊರೊನ ನೆಗೆಟಿವ್‌ ಪ್ರಮಾಣಪತ್ರ ಹೊಂದಿರಬೇಕು. ತರಗತಿಗೆ ಬರುವುದು ವಿದ್ಯಾರ್ಥಿಗಳ ಮತ್ತು ಪೋಷಕರ ನಿರ್ಧಾರಕ್ಕೆ ಬಿಟ್ಟ ವಿಚಾರ. ಆಫ್ ಲೈನ್‌ ಕ್ಲಾಸ್‌ ಇಷ್ಟವಿಲ್ಲದವರು ಆನ್‌ ಲೈನ್‌ ಕ್ಲಾಸ್‌ನಲ್ಲಿ ಮುಂದುವರಿಯಬಹುದು ಎಂದು ರೂಪಾ ಹೇಳಿದ್ದಾರೆ.
ಕಾಲೇಜು ಪ್ರವೇಶ ಧ್ವಾರದಲ್ಲೇ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಇರಬೇಕು. ಉಪನ್ಯಾಸಕರು ಸೇರಿದಂತೆ ಎಲ್ಲ ಸಿಬಂದಿಗಳು ಮಾಸ್ಕ್‌ ಧರಿಸುವುದು ಕಡ್ಡಾಯ. ಶೀತ, ಜ್ವರ, ಉಸಿರಾಟದ ಸಮಸ್ಯೆ ಇರುವ ವಿದ್ಯಾರ್ಥಿಗಳು ಹಾಗೂ ಸಿಬಂದಿಗಳಿಗೆ ಕ್ಯಾಂಪಸ್‌ ಪ್ರವೇಶ ಕೊಡಬಾರದು. ತರಗತಿ ಕೊಠಡಿಗಳನ್ನು ನಿತ್ಯ ಸ್ಯಾನಟೈಸ್‌ ಮಾಡುವಂಥ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರೂಪಾ ಸೂಚಿಸಿದ್ದಾರೆ. ಕ್ಯಾಂಪಸ್‌ ಒಳಗೆ ಯಾರೂ ಉಗುಳದಂತೆ ನೋಡಿಕೊಳ್ಳಬೇಕು. ಎಲ್ಲರೂ ಆರೋಗ್ಯಸೇತು app ಡೌನ್‌ಲೋಡ್‌ ಮಾಡಿಕೊಂಡಿರಬೇಕು ಎಂದಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!