ಬಿ.ಆರ್.‌ ಶೆಟ್ಟಿ ಯುಎಇ ಪ್ರಯಾಣಕ್ಕೆ ವಿಮಾನ ನಿಲ್ದಾಣದಲ್ಲಿ ತಡೆ

ಬೆಂಗಳೂರು,ನ.15 : ತಮ್ಮ ಕಂಪೆನಿಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ನೆರವು ನೀಡುವುದಕ್ಕಾಗಿ 8 ತಿಂಗಳ ನಂತರ ಯುಎಇಗೆ ತೆರಳಲು ಹೊರಟಿದ್ದ ಎನ್‌ಎಂಸಿ ಹೆಲ್ತ್ ಮತ್ತು ಫಿನ್‌ ಬ್ಲರ್ ಕಂಪೆನಿಗಳ ಮಾಲೀಕ ಬಿ.ಆರ್. ಶೆಟ್ಟಿ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಶನಿವಾರ ಬೆಳಗ್ಗೆ ತಡೆ ಒಡ್ಡಿದ್ದಾರೆ.
ಶೆಟ್ಟಿ ಅವರು ಇತ್ತಿಹಾದ್ ವಿಮಾನದಲ್ಲಿ ಯುಎಇಗೆ ತೆರಳಲು ಮುಂದಾಗಿದ್ದಾಗ ಈ ಘಟನೆ ನಡೆದಿದೆ. ಬಿ.ಆರ್. ಶೆಟ್ಟಿ ಮೇಲೆ ಯುಎಇಯಲ್ಲಿ ಹಣಕಾಸು ಅಕ್ರಮ ಎಸಗಿದೆ ಆರೋಪವಿದೆ.
ಯುಎಇಗೆ ಹಿಂದಿರುಗುವ ಭರವಸೆ ನೀಡಿದ್ದೆ. ಈ ಭರವಸೆಯ ಈಡೇರಿಕೆಗಾಗಿ ಅಲ್ಲಿಗೆ ತೆರಳಿದ್ದೆ. ತಮಗೆ ಯುಎಇಯ ನ್ಯಾಯ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ ಎಂದು ಬಿ.ಆರ್‌ . ಶೆಟ್ಟಿಯವರು ಪ್ರತಿಕ್ರಿಯಿಸಿದ್ದಾರೆ.















































































































































error: Content is protected !!
Scroll to Top