ಮಂಗಳೂರು, ನ.13 : ಮಂಗಳೂರು ವಿವಿ ಈ ಮೊದಲು ಡಿ.1 ರಿಂದ ಕಾಲೇಜುಗಳನ್ನು ಪ್ರಾರಂಭಿಸಲು ಹೊರಡಿಸಿದ್ದ ಸುತ್ತೋಲೆಯನ್ನು ಹಿಂದೆಗೆದುಕೊಂಡಿದ್ದು, ನ.17ರಿಂದಲೇ ಕಾಲೇಜುಗಳನ್ನು ಪ್ರಾರಂಭಿಸಲು ಹೊಸದಾಗಿ ಸುತ್ತೋಲೆ ಹೊರಡಿಸಿದೆ.
ವಿವಿಯ ಸಿಂಡಿಕೇಟ್ ಸಭೆಯಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ತಯಾರಿಗಾಗಿ ಸಮಯಾವಕಾಶ ಬೇಕಾಗಿರುವುದರಿಂದ ಡಿ.1 ರಿಂದ ಕಾಲೇಜುಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಬಳಿಕ ಸರಕಾರದ ನಿರ್ದೇಶನ ಪ್ರಕಾರ ನ.17ರಿಂದಲೇ ಕಾಲೇಜುಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಸುತ್ತೋಲೆ ಹಿಂದೆಗೆದುಕೊಂಡ ವಿವಿ: ನ.17ರಿಂದಲೇ ಕಾಲೇಜುಗಳು ಆರಂಭ






















