ಕಾರ್ಕಳ ತಾಲೂಕಿನ ಕಲಂಬಾಡಿ ಪದವಿನ ಬಹುಮುಖ ಪ್ರತಿಭೆ ಪ್ರಜ್ವಲ್ ಆಚಾರ್ಯ. ಎಳೆವೆಯಲ್ಲೇ ಅಮೂರ್ತ ಚಿತ್ರದಲ್ಲಿ ಅತೀವ ಒಲವಿರುವ ಇವರು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಚಿತ್ರಕಲಾ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಚಿತ್ರಕಲೆ ಮಾತ್ರವಲ್ಲದೆ ಕ್ರಿಯೇಟಿವ್ ಕ್ರಾಫ್ಟ್ ಮೇಕರ್. ಭಾಷಣ, ಅಭಿನಯ, ಕ್ರೀಡೆ, ರಸಪ್ರಶ್ನೆಗಳಲ್ಲಿಯೂ ಹೆಚ್ಚಿನ ಆಸಕ್ತಿ ಅವರಿಗಿದೆ.

ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ ಕನ್ನಡ ಮಾಧ್ಯಮದಲ್ಲಿ ಎಸ್ಎಸ್ಎಲ್ ಸಿ ಅಧ್ಯಯನ ಮಾಡುತ್ತಿರುವ ಇವರು ಎನ್.ಎಂ.ಎಂ.ಎಸ್ ರಾಷ್ಟ್ರೀಯ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿವೇತನ ಪಡೆಯುತ್ತಿದ್ದಾರೆ. ಭಾರತೀಯ ಸ್ಕೌಟ್ ಗೈಡ್ಸ್ ನಲ್ಲಿ ತೃತೀಯ ಸೋಪಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉತ್ತಮ ಸ್ಕೌಟರ್ ಆಗಿದ್ದಾರೆ. ಚಿತ್ರಗಾರನಾಗುವ ಗುರಿಯನ್ನು ಹೊಂದಿರುವ ಪ್ರಜ್ವಲ್ ಗೆ ಸಾಥ್ ಕೊಡುವವರು ತಂದೆ ರಮೇಶ್ ಆಚಾರ್ಯ ಮತ್ತು ತಾಯಿ ಸುಮಲತಾ.
ಮಾನಸ ಕಲಾ ಶಾಲೆಯ ಚಂದ್ರನಾಥ ಬಜಗೋಳಿಯವರ ಬಳಿ ಚಿತ್ರಕಲಾ ತರಬೇತಿ ಪಡೆಯುತ್ತಿದ್ದಾರೆ.
ದೇವದಾಸ್ ಕೆರೆಮನೆ
























