Tuesday, July 5, 2022
spot_img
Homeಅಂಕಣಇದೇನಾ ಇತಿಹಾಸ…! -ನಡೆದುದೆಲ್ಲವೂ ಸ್ವಾತಂತ್ರ್ಯ ಹೋರಾಟವೇ?

ಇದೇನಾ ಇತಿಹಾಸ…! -ನಡೆದುದೆಲ್ಲವೂ ಸ್ವಾತಂತ್ರ್ಯ ಹೋರಾಟವೇ?

ಭಾರತದ ಇತಿಹಾಸದ ಪುಟಗಳನ್ನು ತೆರೆದಾಗ ಸ್ವಾತಂತ್ರ್ಯ ಹೋರಾಟದ ಹಾದಿ ಪ್ರಾಚೀನ ಕಾಲದ ಕ್ರಿ. ಪೂ. 3260ರಿಂದ ಅಧುನಿಕ ಯುಗದ ಕ್ರಿ.ಶ. 1947ರ ವರೆಗಿನ ದೀರ್ಘ ಅವಧಿಯಲ್ಲಿ ಭಾರತದ ಅನೇಕ ವೀರರು ಪರಕೀಯರ ವಿರುದ್ದ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆಂಬ ವಿಷಯವನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ ಮತ್ತು ಬಹಳಷ್ಟು ಸಲ ಅಧುನಿಕ ಸಂಘಟನೆಗಳು ಪ್ರತಿಯೊಬ್ಬ ಹೋರಾಟಗಾರರನ್ನು ಬ್ರಾಂಡ್ ಅಂಬಾಸಿಡರ್ ಎಂಬಂತೆ ತಮ್ಮ ಲಾಂಛನದಲ್ಲಿ ಅವರ ಭಾವಚಿತ್ರವನ್ನು ಪ್ರಕಟಿಸಿ ಪ್ರಚಾರ ಪಡೆಯುತ್ತಿರುವುದನ್ನು ನಾವು ಕಾಣಬಹುದು.
ಆದರೆ ನಿಜವಾಗಿಯೂ ಆ ಎಲ್ಲಾ ಹೋರಾಟಗಾರರು ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದರೇ ಅಥವಾ ತಮ್ಮ ಸ್ವಾತಂತ್ರ್ಯಕ್ಕಾಗಿಯೇ ಎನ್ನುವ ಒಂದು ಗಂಭೀರ ಪ್ರಶ್ನೆ ಮೂಡಿದಾಗ ನೀವು ನಿಜವಾಗಿಯೂ ಗೊಂದಲಕ್ಕೆ ಒಳಗಾಗುತ್ತೀರಿ.
ಪ್ರಪ್ರಥಮವಾಗಿ ಪರಕೀಯರ ವಿರುದ್ದ ಹೋರಾಡಿದ ಪೋರಸ್ (ಪುರುರವ) ಗ್ರೀಕ್ ದೊರೆ ಅಲೆಕ್ಸಾಂಡರನ ವಿರುದ್ದ ಯೆಲಂ
ಯುದ್ಧವನ್ನು ಮಾಡುತ್ತಾನೆ. ಹಾಗಾಗಿ ಹಲವು ಕಡೆ ಪೋರಸ್‍ನನ್ನು ಮೊತ್ತ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂದೂ ಚಿತ್ರಿಸುವುದಿದೆ.
ವಾಸ್ತವವಾಗಿ ರಾಷ್ಟ್ರೀಯತೆಯ ಪರಿಕಲ್ಪನೆ ಇಡೀ ಜಗತ್ತಿಗೆ ಪರಿಚಯವಾಗಿರುವುದು 1789ರ ಫ್ರಾನ್ಸ್ ಕ್ರಾಂತಿಯ ನಂತರ. ಅಲ್ಲಿಯವರೆಗೆ ರಾಷ್ಟ್ರೀಯತೆ, ದೇಶ ಎಂಬೆಲ್ಲ ಪರಿಕಲ್ಪನೆಗಳು ಸ್ಪಷ್ಟವಾಗಿ ಗೋಚರಿಸಲಿಲ್ಲ. ಹಾಗಿದ್ದಾಗ ಅದಕ್ಕೂ
ಹಿಂದಿನ ಹೋರಾಟಗಳನ್ನು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟ ಎಂದು ಪರಿಗಣಿಸಲು ಸಾಧ್ಯವೇ? ಈ ಪ್ರಶ್ನೆಗೆ ಉತ್ತರ
ಹುಡುಕಬೇಕಾಗಿದೆ. ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟ ಅಲ್ಲವಾದರೆ ಕ್ರಿ.ಪೂ. 326 ರಿಂದ ಕ್ರಿ.ಶ. 1857ರ ನಡುವೆ ನಡೆದ
ಹೋರಾಟಗಳ ಸ್ವರೂಪ ಏನು? ಅದುವೇ “ವೈಯಕ್ತಿಕ ಸ್ವಾತಂತ್ರ್ಯ ಹೋರಾಟ”
ವೈಯಕ್ತಿಕ ಸ್ವಾತಂತ್ರ್ಯ ಎಂದರೆ ವ್ಯಕ್ತಿ ಕೇಂದ್ರಿತವಾಗಿರಬಹುದು ಅಥವಾ ರಾಜ ಕೇಂದ್ರೀತವಾಗಿರಬಹುದು. ಒಬ್ಬ
ರಾಜ ಅವನ ಅಸ್ತಿತ್ವಕ್ಕೆ ಅಥವಾ ಅವನ ರಾಜ್ಯದ ಅಸ್ತಿತ್ವಕ್ಕೆ ಧಕ್ಕೆಬಂದಾಗಲೆಲ್ಲ ಪರಕೀಯರ ವಿರುದ್ದ ಹೋರಾಡಿದ್ದಾನೆ. ಉದಾ: ಟಿಪ್ಪು, ಮರಾಠರು, ಲಕ್ಷ್ಮೀ ಬಾಯಿ, ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಹೀಗೆ ಪಟ್ಟಿ ಉದ್ದಕ್ಕೆ ಹೋಗುತ್ತದೆ. ಆ ಹೊತ್ತಿಗೆ
ಇವರಾರಿಗೂ ಇಡೀ ದೇಶದ ಪರಿಕಲ್ಪನೆ ಇರಲಿಲ್ಲ. ಬಹುತೇಕ ಸಂದರ್ಭ ಪರಕೀಯರ ವಿರುದ್ದ ಹೋರಾಡಲು ಒಬ್ಬರಿಗೊಬ್ಬರು ಸಹಕರಿಸಲಿಲ್ಲ. ಬದಲಾಗಿ ಸ್ಥಳೀಯ ಇತರ ರಾಜರುಗಳ ವಿರುದ್ಧ ಇನ್ನೊಂದು ರಾಜ್ಯ ಪರಕೀಯರಿಗೇ
ಬೆಂಬಲಕೊಟ್ಟ ಸಾಕಷ್ಟು ನಿದರ್ಶನಗಳಿವೆ. ಈ ಮೇಲೆ ಹೇಳಿದ ರಾಜ, ರಾಣಿಯರನ್ನು ಸೇರಿದಂತೆ ಹೋರಾಡಿದ ಇಂತಹ ಅನೇಕರು ತಮ್ಮ ವೈಯಕ್ತಿಕ ಮತ್ತು ತಮ್ಮ ರಾಜ್ಯದ ಹಿತದೃಷ್ಟಿಯಿಂದ ನಡೆಸಿದ ವೈಯಕ್ತಿಕ ಸ್ವಾತಂತ್ರ್ಯ ಹೋರಾಟವೇ ಹೊರತು ರಾಷ್ಟ್ರೀಯ ಹೋರಾಟವಾಗಿರಲಿಲ್ಲ. ಯಾಕೆಂದರೆ ಇಡೀ ದೇಶದಲ್ಲಿ ಏಕಕಾರಣಕ್ಕೆ ಏಕಕಾಲಕ್ಕೆ ನಡೆದ ಹೋರಾಟ 1885ರ ತನಕ ನಡೆದಿಲ್ಲ ಮತ್ತು ಸಂಘಟನಾತ್ಮಕ ಹೋರಾಟವು ನಡೆಯಲಿಲ್ಲ.
ದಕ್ಷಿಣ ಭಾರತದಲ್ಲಿ ಪ್ರೆಂಚ್ ಮತ್ತು ಬ್ರಿಟಿಷರ ನಡುವೆ ನಡೆದ ಕಾರ್ನಾಟಿಕ್ ಕದನವು ನಮ್ಮವರ ಸಂಘಟನೆ ಮತ್ತು ಏಕತೆಯ ಕೊರತೆಯಿಂದ ಅಗಿರುವುದು ಭಾರತಕ್ಕೆ 712 ರಿಂದ ನಂತರ ನಡೆದ ಪರಕೀಯ ದಾಳಿಗಳೂ ನಮ್ಮವರ
ಸಹಾಯದಿಂದಲೇ ಆಗಿದೆ ಎಂದಾದರೆ ನಮಗೆ ರಾಷ್ಟ್ರೀಯ ಪ್ರಜ್ಞೆಯೇ ಇರಲಿಲ್ಲ ಎಂದರ್ಥ ಹಾಗಾದಲ್ಲಿ ರಾಷ್ಟ್ರೀಯ
ಸ್ವಾತಂತ್ರ್ಯ ಹೋರಾಟದ ಅಸ್ತಿತ್ವ ಏಲ್ಲಿದೆ.
ರಾಷ್ಟ್ರೀಯತೆಯ ಸ್ಪಷ್ಟ ಕಲ್ಪನೆಯೊಂದಿಗೆ ಸ್ವಾತಂತ್ರ್ಯ ಹೋರಾಟ ನಡೆದಿರುವುದೇ 1885ರ ನಂತರ. ತಿಲಕ್,ಲಜಪತ್ ರಾಯ್, ಕುದಿರಾಂ ಬೋಸ್, ಆಜಾದ್, ಗಾಂಧಿ, ಗೋಖಲೆ, ಬೋಸ್ ಇವರೆಲ್ಲರಿಗೂ ತಮ್ಮ ವೈಯಕ್ತಿಕ
ಕಾರಣಗಳಿಲ್ಲ. ಬ್ರಿಟಿಷರು ವೈಯಕ್ತಿಕವಾಗಿ ಇವರಿಗೇನು ಮಾಡಲಿಲ್ಲ. ಆದರೂ ಇವರು ಒಂದು ಸಂಘಟನಾತ್ಮಕ ಸಾಂವಿಧಾನಿಕ ರಾಜಕೀಯ ಹೋರಾಟವನ್ನು ಮಾಡಿರುವುದು ಇಡೀ ದೇಶವನ್ನು ಸ್ವಾತಂತ್ರ್ಯಗೊಳಿಸಲೇ ಹೊರತು ಇವರ ವ್ಯಯಕ್ತಿಕ ಭೂಮಿ, ಸಂಪತ್ತನ್ನು ಉಳಿಸಿಕೊಳ್ಳಲು ಅಲ್ಲ. ರಾಜರುಗಳೆಲ್ಲರೂ ಹೋರಾಡಿರುವುದು ಅವರ ವೈಯಕ್ತಿಕ ರಾಜ್ಯ,
ಸಂಪತ್ತಿನ ಮೇಲೆ ದಾಳಿಯಾದಾಗ. ಯಾಕೆಂದರೆ ಅವರ ಲಾಭಕ್ಕಾಗಿಯೇ ಹೊರತು ಇಡೀ ದೇಶದ ಲಾಭಕಲ್ಲ. ಆದ್ದರಿಂದ ನಡೆದ ಎಲ್ಲಾ ಹೋರಾಟಗಳು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟ ಎಂದು ಬಿಂಬಿಸುವುದು ಮತ್ತು ಅಂತವರನ್ನು ರಾಷ್ಟ್ರೀಯ ಹೋರಾಟಗಾರ ಎಂದು ಬಿಂಬಿಸುವುದು ಸೂಕ್ತವೆನಿಸದು. ಆದಾಗ್ಯೂ ಅವರ ವೈಯಕ್ತಿಕ ಲಾಭದ ಹೋರಾಟ ರಾಷ್ಟ್ರೀಯ
ಸ್ವಾತಂತ್ರ್ಯ ಹೋರಾಟಕ್ಕೆ ಫಲ ನೀಡಿರುವುದು ಸತ್ಯ.
ಡಾ.ನಾರಾಯಣ ಶೇಡಿಕಜೆ
ಪ್ರಾಂಶುಪಾಲರು, ಕ್ರೈಸ್ಟ್‌ಕಿಂಗ್‌ ಕಾಲೇಜ್‌, ಕಾರ್ಕಳ---

1 COMMENT

  1. ಸರ್ ಸ್ವಾತಂತ್ರ್ಯ ಹೋರಾಟದ ನೈಜ ಚಿತ್ರಣವನ್ನು ತುಂಬಾನೆ ಮನೋಜ್ಞವಾಗಿ ವಿವರಿಸಿದ್ದೀರಿ. ಈಗಿನ ವರ್ತಮಾನ ಗಮನಿಸಿದರೆ ನಮ್ಮನ್ನಾಳುವ ನಾಯಕರಿಗೆ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆಯೆ ಗೊತ್ತಿಲ್ಲ.. ಪಕ್ಷದ ಅಜೆಂಡಾಗಳನ್ನು ಮುಂದೆ ಇಟ್ಟುಕೊಂಡು ಅದರ ನೇರಕ್ಕೆ ಸ್ವಾತಂತ್ರ್ಯದ ಹೋರಾಟದ ರಾಷ್ಟ್ರೀಯತೆಯ ಕಲ್ಲನೆ ಅವರ ಅಪ್ರಬುದ್ದತೆಯ ಸಂಕೇತ ಮತ್ತು ದುರಂತವಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!