ಟ್ರಂಪ್‌ ಸೋಲು ಬಹುತೇಕ ಖಚಿತ


ವಾಷಿಂಗ್ಟನ್,ನ. 6: ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಣಾಹಣಿ ರೋಚಕ ಘಟ್ಟ ತಲುಪಿದ್ದು, ಡೆಮೋಕ್ರಾಟಿಕ್ ಪಕ್ಷದ ಜೋ ಬೈಡನ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಅಮೆರಿಕದ ಪ್ರಮುಖ ರಾಜ್ಯಗಳಲ್ಲಿ ಜೋ ಬೈಡನ್ ಮುನ್ನಡೆ ಸಾಧಿಸಿದ್ದರು. ಇದೀಗ ಜಾರ್ಜಿಯಾ ಹಾಗೂ ನೆವಾಡಾದಲ್ಲೂ ಮೇಲುಗೈ ಸಾಧಿಸಿದ್ದು, ಬೈಡನ್ ವೈಟ್ ಹೌಸ್ ಹಾದಿ ಮತ್ತಷ್ಟು ಸುಗಮವಾಗಿದೆ.
ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಂದ ಸಾಕಷ್ಟು ಮುಂದಿರುವ ಜೋ ಬೈಡನ್ ಜಾರ್ಜಿಯಾ ಹಾಗೂ ನೆವಾಡಾದಲ್ಲೂ ಮುನ್ನಡೆ ಸಾಧಿಸುತ್ತಿದ್ದಾರೆ. ಇದರೊಂದಿಗೆ ಅಮೆರಿಕ ಅಧ್ಯಕ್ಷ ಗಾದಿ ಮತ್ತೊಮ್ಮೆ ವಶಪಡಿಸಿಕೊಳ್ಳಬೇಕೆಂಬ ಡೋನಾಲ್ಡ್ ಟ್ರಂಪ್‌ ಆಸೆ ಛಿದ್ರವಾಗಿದೆ.















































































































































error: Content is protected !!
Scroll to Top