ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 3.5 ಕೋಟಿ ರೂ. ಬಿಡುಗಡೆ

ಕಾರ್ಕಳ : ಕಾರ್ಕಳ ತಾಲೂಕು ಕ್ರೀಡಾಂಗಣ ಬಳಿ ನಿರ್ಮಾಣವಾಗಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಕೇಂದ್ರ ಸರಕಾರದಿಂದ 3.5 ಕೋಟಿ ರೂ. ಬಿಡುಗಡೆಗೊಂಡಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದರು. ಕ್ರೀಡಾಸಕ್ತರ ಅನುಕೂಲಕ್ಕಾಗಿ ಒಳಾಂಗಣ ಕ್ರೀಡಾಂಗಣ ರಚನೆಗಾಗಿ ಈ ಹಿಂದೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಇದೀಗ ಅನುದಾನ ಬಿಡುಗಡೆಗೊಂಡಿರುವುದು ಕ್ರೀಡಾಪಟುಗಳಲ್ಲಿ ಮತ್ತಷ್ಟು ಉತ್ತೇಜನ ತುಂಬಿದಂತಾಗಿದೆ ಎಂದು ಶಾಸಕರು ತಿಳಿಸಿದರು.















































































































































error: Content is protected !!
Scroll to Top