ನಿಟ್ಟೆ ಎ ಮತ್ತು ಬಿ ಒಕ್ಕೂಟ ಪದಗ್ರಹಣ

ಕಾರ್ಕಳ, ನ.2: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಮಣ್‌ ವಲಯದ ನಿಟ್ಟೆ ಒಕ್ಕೂಟದ ಪದಗ್ರಹಣ ನಿಟ್ಟೆ ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೂಡಬಿದಿರೆ ತಾಲೂಕಿನ ಯೋಜನಾಧಿಕಾರಿ ನಾರಾಯಣ ಶೆಟ್ಟಿ ಅವರು ಯೋಜನೆ ಮೂಲಕ ನಡೆಯುವ ವಿವಿಧ ಕಾರ್ಯಕ್ರಮಗಳ ಸದುಪಯೋಗವನ್ನು ಸದಸ್ಯರು ಪಡೆದುಕೊಳ್ಳಬೇಕು. ಸಂಘವು ಕೊರೊನ ಜಾಗೃತಿ ಜೊತೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ನೂತನ ಪದಾಧಿಕಾರಿಗಳಿಗೆ ವೀಳ್ಯದೆಲೆ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ವಲಯ ಮೇಲ್ವಿಚಾರಕಿ ಪ್ರಣೀತಾ, ನಿಕಟ ಪೂರ್ವ ಅಧ್ಯಕ್ಷರಾದ ಧರಣೇಂದ್ರ ಜೈನ್, ಪ್ರಭಾಕರ್ ಶೆಟ್ಟಿ, ನೂತನ ಅಧ್ಯಕ್ಷ ಸಂದೀಪ್ ಕುಮಾರ್, ಸುನಿಲ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿಗಳಾದ ಶ್ವೇತಾ ಸ್ವಾಗತಿಸಿ ವರದಿ ಮಂಡಿಸಿದರು ಹಾಗೂ ಸವಿತಾ ಪದಾಧಿಕಾರಿಗಳ ಪರಿಚಯ ಮಂಡಿಸಿದರು. ಪ್ರಣೀತಾ ಪ್ರಸ್ತಾವನೆಗೈದರು. ಗಣೇಶ್ ಕಾರ್ಯಕ್ರಮ ನಿರೂಪಿಸಿದರು.









































































































error: Content is protected !!
Scroll to Top