Homeಸ್ಥಳೀಯ ಸುದ್ದಿನದಿಯನ್ನು ಆರಾಧಿಸಿ ಸ್ವಚ್ಛತೆಯ ಜಾಗೃತಿ ಮೂಡಿಸುವ ವಿಶಿಷ್ಟ ಕಾರ್ಯಕ್ರಮ ಸ್ವರ್ಣಾರಾಧನಾ

Related Posts

ನದಿಯನ್ನು ಆರಾಧಿಸಿ ಸ್ವಚ್ಛತೆಯ ಜಾಗೃತಿ ಮೂಡಿಸುವ ವಿಶಿಷ್ಟ ಕಾರ್ಯಕ್ರಮ ಸ್ವರ್ಣಾರಾಧನಾ

ಕಾರ್ಕಳ, ನ. 2 : ಕಾರ್ಕಳದ ಇತಿಹಾಸ ಪ್ರಸಿದ್ಧವಾದ ಸಾಣೂರು ಮಠದ ಕೆರೆ ಅಂಗಳದಲ್ಲಿ ಮಹತ್ವಾಕಾಂಕ್ಷೆಯ ಸ್ವರ್ಣಾರಾಧನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಡುಪಿ ಜಿಲ್ಲೆಯಲ್ಲಿ ನಾಲ್ಕು ತಾಲೂಕಿನ ಜನರಿಗೆ ಕುಡಿಯುವ ನೀರು ಒದಗಿಸುವ ಸ್ವರ್ಣಾ ನದಿಯ ಶುದ್ಧೀಕರಣದ ಮಹಾ ಉದ್ದೇಶವನ್ನು ಇಟ್ಟುಕೊಂಡು ಆರಂಭವಾದ ಈ ಯೋಜನೆಯನ್ನು ಕಾರ್ಕಳದಲ್ಲಿ ಅನುಷ್ಠಾನ ಮಾಡುವ ಈ ಯೋಜನೆಯನ್ನು ಕಾರ್ಕಳ ಪುರಸಭೆಯ ಅಧ್ಯಕ್ಷರಾದ ಸುಮಾ ಕೇಶವ್ ಗಿಡವನ್ನು ನೆಡುವುದರ ಮೂಲಕ ಉದ್ಘಾಟಿಸಿ ಶುಭ ಕೋರಿದರು.
ಸ್ವರ್ಣಾರಾಧನಾ ಯೋಜನೆಯ ಜಿಲ್ಲಾ ಅಧ್ಯಕ್ಷರಾದ ಡಾ.ನಾರಾಯಣ ಶೆಣೈ ಅವರು ಯೋಜನೆಯ ವಿಸ್ತಾರವಾದ ಪರಿಚಯ ನೀಡಿ ಕಾರ್ಕಳದ ಎಲ್ಲಾ ಸಂಘ ಸಂಸ್ಥೆಗಳ ಬೆಂಬಲ ಕೋರಿದರು.
61 ಕಿಲೋಮೀಟರ್ ಉದ್ದಕ್ಕೆ ಹರಿಯುವ ಮತ್ತು ಶುದ್ಧ ಕುಡಿಯುವ ನೀರನ್ನು ಹೊಂದಿರುವ ಈ ನದಿಯನ್ನು ಪೂಜ್ಯ ಭಾವನೆಯಿಂದ ಆರಾಧನೆ ಮಾಡುವ ಮತ್ತು ನದಿಯ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಈ ಕಾರ್ಯಕ್ರಮ ಅತ್ಯಂತ ಮಹತ್ವಪೂರ್ಣ ಎಂದು ಅವರು ಹೇಳಿದರು. ನಿಟ್ಟೆ ಡಿಪ್ಲೊಮಾ ಕಾಲೇಜಿನ ಪ್ರಾಧ್ಯಾಪಕ ವೆಂಕಟರಮಣ ಪ್ರಸಾದ, ಪುರಸಭೆಯ ಉಪಾಧ್ಯಕ್ಷೆ ಪಲ್ಲವಿ, ಸ್ವಚ್ಛ ಕಾರ್ಕಳ ಬ್ರಿಗೇಡಿಯರ್ ಸಂಸ್ಥೆಯ ಫೆಲಿಕ್ಸ್ ವಾಜ್ ಮುಖ್ಯ ಅತಿಥಿಗಳಾಗಿ ಶುಭ ಕೋರಿದರು. ಸ್ವಚ್ಚ ಕಾರ್ಕಳ ಬ್ರಿಗೇಡ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಘಟಕ, ರೋವರ್ಸ್ ಮತ್ತು ರೇಂಜರ್ಸ್, ರೋಟರಿ ಆನ್ಸ್ ಮತ್ತು ರೋಟರಾಕ್ಟ್, ಯುವ ವಾಹಿನಿ ಕಾರ್ಕಳ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದವು. ರೋವರ್ಸ್ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಮಾನಸ ಸ್ವಾಗತಿಸಿ ವಿಜ್ಞೇಶ್ ಸಂಕಲ್ಪ ಬೋಧನೆ ಮಾಡಿದರು. Jci ರಾಜೇಂದ್ರ ಭಟ್ ಅವರು ಪ್ರಸ್ತಾವನೆ ಗೈದರು,ರೋಟರಿ ಆನ್ಸ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್, ರಾಜೇಂದ್ರ ಅಮೀನ್, ಜಗದೀಶ್ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು. ಯುವ ವಾಹಿನಿ ಅಧ್ಯಕ್ಷ ಗಣೇಶ್ ಸಾಲ್ಯಾನ್ ವಂದಿಸಿದರು.

LEAVE A REPLY

Please enter your comment!
Please enter your name here

Latest Posts

error: Content is protected !!