ರಕ್ಷಿತಾ ನಾಯಕ್‌ ಸಾವಿನ ಪ್ರಕರಣ : ಶಂಕಿತ ಆರೋಪಿ ಪ್ರಶಾಂತ ಪೊಲೀಸ್‌ ಕಸ್ಟಡಿಗೆ

ಉಡುಪಿ, ನ. 2 : ಕಳೆದ ಅಕ್ಟೋಬರ್‌ 24ರಂದು ಉಡುಪಿಯಲ್ಲಿ ಸಂಭವಿಸಿರುವ ರಕ್ಷಿತಾ ನಾಯಕ್‌ ಎಂಬ ಹದಿಹರೆಯದ ಯುವತಿಯ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸೆರೆಯಾಗಿರುವ ಆಕೆಯ ಪ್ರಿಯಕರ ಎನ್ನಲಾದ ಪ್ರಶಾಂತ್‌ ಮೊಗವೀರನನ್ನು ನ್ಯಾಯಾಲಯ ಮೂರು ದಿನಗಳ ಮಟ್ಟಿಗೆ ಪೊಲೀಸರ ಕಸ್ಟಡಿಗೊಪ್ಪಿಸಿದೆ.
ಪ್ರಶಾಂತ್‌ ಮೊಪಗವೀರನ ಮೇಲೆಯೇ ಅನುಮಾನವಿದ್ದ ಕಾರಣ ಒಂದು ವಾರ ಪೊಲೀಸರು ಅವನನ್ನು ಠಾಣೆಗೆ ಕರೆಸಿ ಪ್ರಶ್ನಿಸಿದ್ದರು. ಅನಂತರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿ ಪ್ರಶಾಂತ ಮೊಗವೀರ

ಅ.24ರಂದು ಪ್ರಶಾಂತ್‌ ಮೊಗವೀರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಕ್ಷಿತಾಳನ್ನು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದನು. ಆಸ್ಪತ್ರೆಯಲ್ಲಿ ತನ್ನ ಹೆಸರು ಮತ್ತು ಮೊಬೈಲ್‌ ನಂಬರ್‌ ಕೊಟ್ಟಿದ್ದರೂ ದಾರಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು ಎಂದು ಸುಳ್ಳು ಹೇಳಿದ್ದ. ಆಸ್ಪತ್ರೆಯಿಂದ ಹೊರಗೆ ಹೋದ ಬಳಿಕ ಅವನ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು.ಚಿಕಿತ್ಸೆ ಫಲಿಸದೆ ರಕ್ಷಿತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ವಿವಾಹಿತನಾಗಿದ್ದ ಪ್ರಶಾಂತ್‌ ಮೊಗವೀರನಿಗೆ ಇನ್‌ ಸ್ಟಾಗ್ರಾಂನಲ್ಲಿ ರಕ್ಷಿತಾಳ ಪರಿಚಯವಾಗಿತ್ತು. ಅನಂತರ ಅವರು ನಿಕಟವಾಗಿದ್ದರು. ತನಗೆ ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟಿದ್ದ. ರಕ್ಷಿತಾ ಮನೆಯಲ್ಲಿ ಸುಳ್ಳು ಹೇಳಿ ಅವನೊಂದಿಗೆ ಹೋಗಿದ್ದಳು. ಅಂಬಾಗಿಲು ಬಳಿ ಬಾಡಿಗೆ ಮನೆ ಮಾಡಿ ಅವಳನ್ನು ಇರಿಸಿದ್ದ ಹಾಗೂ ಅವಳಿಗೆ ಮದ್ಯಪಾನ ಹಾಗೂ ಸಿಗರೇಟಿನ ಚಟ ಕಲಿಸಿದ್ದ. ರಕ್ಷಿತಾಳ ಮನೆಯವರು ನೀಡಿದ ದೂರಿನ ಪ್ರಕಾರ ಪೊಲೀಸರು ಪ್ರಶಾಂತ್‌ ಮೊಗವೀರನನ್ನು ಬಂಧಿಸಿದ್ದಾರೆ.









































































































error: Content is protected !!
Scroll to Top