Homeರಾಜ್ಯಸರಕಾರಿ ಶಾಲೆಗಳಿಗೆ ಪ್ರವೇಶಾತಿ 14 ವರ್ಷದಲ್ಲೇ ಗರಿಷ್ಠ

Related Posts

ಸರಕಾರಿ ಶಾಲೆಗಳಿಗೆ ಪ್ರವೇಶಾತಿ 14 ವರ್ಷದಲ್ಲೇ ಗರಿಷ್ಠ

ಬೆಂಗಳೂರು, ನ. 2 : 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಶಾಲೆಗೆ ಸೇರಿದ ಮಕ್ಕಳ ಸಂಖ್ಯೆ 14 ವರ್ಷಗಳಲ್ಲೇ ಗರಿಷ್ಠ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತಿಳಿಸಿದೆ.
ಈ ವರ್ಷ 90,000ಕ್ಕೂ ಅಧಿಕ ಮಕ್ಕಳು ಸರಕಾರಿ ಶಾಲೆಗೆ ಪ್ರವೇಶಾತಿ ಪಡೆದುಕೊಂಡಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.
ಕೊರೊನಾ ವೈರಸ್‌ ಅನೇಕ ಕುಟುಂಬಗಳ ಆದಾಯದ ಮೇಲೆ ನಕರಾತ್ಮಕವಾದ ಪರಿಣಾಮ ಬೀರಿದೆ. ಕೆಳ ಮಧ್ಯಮ ವರ್ಗದವರು ಮತ್ತು ಬಡವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿದ ಪರಿಣಾಮವಾಗಿ ಈ ವರ್ಷ ದಾಖಲೆ ಪ್ರವೇಶಾತಿಯಾಗಿದೆ.
ಇದರೊಂದಿಗೆ ಸರಕಾರಿ ಶಾಲೆಗಳಲ್ಲಿ ಒಟ್ಟು ಮಕ್ಕಳ ಸಂಖ್ಯೆ ಕಳೆದ ವರ್ಷ 41.26 ಲಕ್ಷ ಇದ್ದದ್ದು ಈ ವರ್ಷ 42.16 ಲಕ್ಷಕ್ಕೇರಿದೆ. ಕಳೆದ ಕೆಲವು ವರ್ಷಗಳಿಂದ ಸರಕಾರಿ ಶಾಲೆಗಳ ಪ್ರವೇಶಾತಿಯಲ್ಲಿ ನಕರಾತ್ಮಕ ಅಭಿವೃದ್ಧಿಯನ್ನೇ ನೋಡುತ್ತಿದ್ದೆವು. ಆದರೆ ಈ ವರ್ಷ ದಾಖಲೆ ಸಂಖ್ಯೆಯ ಮಕ್ಕಳು ಸರಕಾರಿ ಶಾಲೆಗಳಿಗೆ ಸೇರಿದ್ದಾರೆ. ಇದು ನಮ್ಮ ನಿರೀಕ್ಷೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ. ಈ ಸಕರಾತ್ಮಕ ಬೆಳವಣಿಗೆಯನ್ನು ಕಾಯ್ದುಕೊಂಡು ಹೋಗಬೇಕು ಎಂದು ಸುರೇಶ್‌ ಕುಮಾರ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!