ದೇವರಗುಂಡಿ ಜಲಪಾತದಲ್ಲಿ ತುಂಡುಡುಗೆ ಫೋಟೊಶೂಟ್:‌ ಕ್ಷಮೆ ಯಾಚಿಸಿದ ಮೋಡೆಲ್‌

0

ಸುಳ್ಯ, ಅ. 30 : ಸುಳ್ಯದ ದೇವರಗುಂಡಿ ಜಲಪಾತದಲ್ಲಿ ತುಂಡುಡುಗೆಯಲ್ಲಿ ಫೋಟೊಶೂಟ್ ನಡೆಸಿದ ಪ್ರಕರಣ ವಿವಾದಕ್ಕೊಳಗಾಗುತ್ತಿದ್ದಂತೆ ಫೋಟೊಶೂಟ್‌ನಲ್ಲಿ ಭಾಗವಹಿಸಿದ ಇಬ್ಬರು ಮೋಡೆಲ್‌ಗಳ ಪೈಕಿ ಬೃಂದಾ ಅರಸ್ ಕ್ಷಮೆ ಯಾಚಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅರೆಬೆತ್ತಲೆ ಫೋಟೊಶೂಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಸುಳ್ಯದ ತೋಡಿಕಾನ ದೇವರಗುಂಡಿ ಜಲಪಾತ ಸ್ಥಳೀಯರ ಧಾರ್ಮಿಕ ನಂಬಿಕೆಯ ಪ್ರತೀಕವಾಗಿದ್ದು ಈ ಜಲಪಾತದ ಸಮೀಪ ಪ್ರಾಚೀನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವಿದೆ. ಇಂಥ ಪವಿತ್ರ ಸ್ಥಳದಲ್ಲಿ ಫೋಟೊಶೂಟ್ ನಡೆಸಲಾಗಿದೆ.
ವಾರದ ಹಿಂದೆ ಬೆಂಗಳೂರಿನಿಂದ ಬಂದಿದ್ದ ತಂಡವೊಂದು ಜಲಪಾತದ ಬಳಿ ಫೋಟೊಶೂಟ್ ನಡೆಸಿ ಅದನ್ನು ಇನ್‌ಸ್ಟಾಗ್ರಾಂಗೆ ಅಪ್ ಲೋಡ್‌ ಮಾಡಿತ್ತು. ಇದು ವೈರಲ್‌ ಆದ ಬಳಿಕ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮೋಡೆಲ್ ಬೃಂದಾ ಅರಸ್ ಕ್ಷಮೆ ಯಾಚಿಸುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.
ನಮಗೆ ಇದು ಪವಿತ್ರ ಸ್ಥಳವೆಂದು ಗೊತ್ತಿರಲಿಲ್ಲ. ಗೊತ್ತಿಲ್ಲದೆ ತಪ್ಪಾಗಿದೆ. ನಮ್ಮ ನಡೆಯಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬೃಂದಾ ಹೇಳಿದ್ದಾರೆ.

Previous articleಲಷ್ಕರ್‌ನಿಂದ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆ : ಪ್ರಧಾನಿ ಖಂಡನೆ
Next articleಕೋಲ್ಕೊತ್ತ ತಂಡವನ್ನು ಹೊರದಬ್ಬಿದ ಚೆನ್ನೈ

LEAVE A REPLY

Please enter your comment!
Please enter your name here