ಕೋಲ್ಕೊತ್ತ ತಂಡವನ್ನು ಹೊರದಬ್ಬಿದ ಚೆನ್ನೈ

0

ಐಪಿಲ್ ಪಂದ್ಯಗಳು ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿವೆ. ಚೆನ್ನೈ ಸೂಪರ್ ಕಿಂಗ್ಸ್ ಕೂಟದಿಂದ ಈಗಾಗಲೇ ಹೊರಬಿದ್ದು ಆಗಿದೆ. ನಿನ್ನೆಯ ಪಂದ್ಯದಲ್ಲಿ ಚೆನ್ನೈ ಕೋಲ್ಕೊತ್ತಾ ತಂಡವನ್ನು ಕೊನೆಯ ಎಸೆತದಲ್ಲಿ ಸೋಲಿಸಿ ಕೂಟದಿಂದ ಹೊರದಬ್ಬಿದೆ. ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆದು ರವೀಂದ್ರ ಜಡೇಜ ಚೆನ್ನೈ ತಂಡವನ್ನು ಗೆಲ್ಲಿಸಿಕೊಟ್ಟರು. ಕೋಲ್ಕೊತ್ತಾ ತಂಡಕ್ಕೆ ಗಾಯಗೊಂಡು ಹೊರ ಉಳಿದ ಆಂಡ್ರೂ ರಸ್ಸೆಲ್ ಅವರ ಕೊರತೆ ತೀವ್ರವಾಗಿ ಕಾಡಿತು. ಇದುವರೆಗೆ ನಡೆದ ಪಂದ್ಯಗಳ ಆಧಾರದಲ್ಲಿ ಮುಂಬೈ 16 ಅಂಕಗಳೊಂದಿಗೆ ಪ್ರಥಮ ಸ್ಥಾನಿ ಆಗಿದೆ. ಕಳೆದ ವರ್ಷದ ಚಾಂಪಿಯನ್ ತಂಡ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಮೂಡಿ ಬಂದಿದೆ. ಎರಡನೇ ಸ್ಥಾನದಲ್ಲಿ RCB ತಂಡ ಇದ್ದರೂ ಮುಂದಿನ ಎರಡು ಪಂದ್ಯಗಳಲ್ಲಿ ಕನಿಷ್ಟ ಒಂದನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಇದೆ. ಡೆಲ್ಲಿ ಮತ್ತು ಹೈದರಾಬಾದ್ ಜೊತೆಗೆ ಮುಂದೆ RCB ಆಡಲು ಬಾಕಿ ಇದೆ. ಎರಡೂ ಕಠಿಣ ಪಂದ್ಯಗಳು. ಮೂರನೇ ಸ್ಥಾನದಲ್ಲಿ 14 ಪಾಯಿಂಟ್ಸ್ ಜೊತೆಗೆ ಡೆಲ್ಲಿ, ನಾಲ್ಕನೇ ಸ್ಥಾನದಲ್ಲಿ 12 ಅಂಕಗಳೊಂದಿಗೆ ಪಂಜಾಬ್ ಕೂತಿವೆ. ಐದು ಪಂದ್ಯಗಳನ್ನು ಸರಣಿಯಲ್ಲಿ ಗೆದ್ದಿರುವ ಪಂಜಾಬ್ ಉತ್ಸಾಹದ ತುದಿಯಲ್ಲಿ ತೇಲುತ್ತಿದೆ. ಉಳಿದಂತೆ 12 ಪಾಯಿಂಟ್ಸ್ ಜೊತೆಗೆ ಕೋಲ್ಕೊತ್ತ ದುರ್ಗಮ ಹಾದಿಯಲ್ಲಿ ಸಾಗುತ್ತಿದೆ. ಚೆನ್ನೈ ಮತ್ತು ರಾಜಸ್ಥಾನ್ ತಂಡಗಳು ಪ್ಲೇ ಆಫ್ ಹಾದಿಯಿಂದ ದೂರ ಇವೆ. ಜಾದೂ ಏನಾದರೂ ನಡೆದರೆ ಮಾತ್ರ ಅವುಗಳಿಗೆ ಅವಕಾಶ ದೊರೆಯಬಹುದು. ಏನಿದ್ದರೂ ಪ್ರತಿ ಪಂದ್ಯವು ಕೂಡ ರೋಮಾಂಚಕ ಅಂತ್ಯ ಪಡೆಯುವ ಕಾರಣ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ.

Previous articleದೇವರಗುಂಡಿ ಜಲಪಾತದಲ್ಲಿ ತುಂಡುಡುಗೆ ಫೋಟೊಶೂಟ್:‌ ಕ್ಷಮೆ ಯಾಚಿಸಿದ ಮೋಡೆಲ್‌
Next articleಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಎಡವಿದೆಯಾ? ತಜ್ಞರ ವರದಿ ಏನು ಹೇಳುತ್ತಿದೆ?

LEAVE A REPLY

Please enter your comment!
Please enter your name here