ದಿಲ್ಲಿ. ಅ.19 : ದಿಲ್ಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಯುವಮೋರ್ಚಾ ನೂತನ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಇಂದು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂದೆ ನಡೆಯಲಿರುವ ಬಿಹಾರ ಮತ್ತು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಪ್ರಜಾಸತ್ತಾತ್ಮಕ ವಿರೋಧಿ ಶಕ್ತಿಗಳ ವಿರುದ್ಧ ಯುವಮೋರ್ಚಾ ಹೋರಾಟ ಮಾಡಲಿದೆ. ಬಿಜೆಪಿಯ ಸಂಸ್ಥಾಪಕರಾದ ಶಾಮಪ್ರಸಾದ ಮುಖರ್ಜಿಯವರ ಸಿದ್ಧಾಂತಗಳನ್ನು ಯುವಮೋರ್ಚಾ ವೇದಿಕೆಗಳ ಮೂಲಕ ಯುವಜನತೆಗೆ ತಲುಪಿಸಲು ಪ್ರಯತ್ನ ಮಾಡುವುದಾಗಿ ನುಡಿದರು. ಅವರು ಯುವಮೋರ್ಚಾ 14ನೆಯ ರಾಷ್ಟ್ರಾಧ್ಯಕ್ಷರು.ಕರ್ನಾಟಕದಿಂದ ಯುವಮೋರ್ಚಾ ರಾಷ್ಟ್ರ ಅಧ್ಯಕ್ಷರಾದ ಮೊದಲ ವ್ಯಕ್ತಿ ತೇಜಸ್ವಿ ಸೂರ್ಯ. ಅವರ ಅಧಿಕಾರವಧಿ ಮೂರು ವರ್ಷ.






































































