ಪ್ರಮುಖ ಕಲಾವಿದರು ಪಟ್ಲ ಸತೀಶ್ ಶೆಟ್ಟಿ ಯಜಮಾನಿಕೆಯ ಪಾವಂಜೆ ಮೇಳಕ್ಕೆ ಸೇರ್ಪಡೆ

ಮಂಗಳೂರು, ಅ. 17: ತೆಂಕುತಿಟ್ಟಿನ ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿಯವರು ತನ್ನ ಯಜಮಾನಿಕೆಯಲ್ಲಿ ಹೊಸ ಮೇಳ ಈ ವರ್ಷ ತಿರುಗಾಟಕ್ಕೆ ಹೊರಡಲಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

  ನ.27ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ , ಪಾವಂಜೆ ಎಂಬ ಹೆಸರಿನಲ್ಲಿ ಮೇಳ ತಿರುಗಾಟ ಪ್ರಾರಂಭಿಸಲಿದೆ. ಮೇಳದಲ್ಲಿ ಯಾರೆಲ್ಲ ಕಲಾವಿದರು ಇರುತ್ತಾರೆ ಎಂಬ ಉಹಾಪೋಹಗಳಿಗೂ ಪಟ್ಲ ಭಾಗವತರು ಮಂಗಳ ಹಾಡಿದ್ದಾರೆ. ಹಲವು ಪ್ರಮುಖ ಕಲಾವಿದರು ಪಟ್ಲರ ಮೇಳ ಸೇರಿದ್ದು, ಅವರ ಹೆಸರನ್ನು ಭಾಗವತರು ಘೋಷಿಸಿದ್ದಾರೆ.

ಮೇಳ ಹೊರಡುವ ಸುದ್ದಿಯನ್ನು ನವರಾತ್ರಿಯ ಆರಂಭದ ದಿನವೇ ಸುದ್ದಿಗೋಷ್ಟೀ ಕರೆದು ಘೋಷಿಸಿದ ಪಟ್ಲ ಸತೀಶ್‌ ಶೆಟ್ಟಿಯವರು  ಮತ್ತು ಪಾವಂಜೆ ದೇವಳದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಇದು ಕಾಲಮಿತಿಯ ಪ್ರದರ್ಶನ ನೀಡುವ ಮೇಳ. ಸಾಮಾನ್ಯವಾಗಿ ಸಂಜೆ 6 ಗಂಟೆಯಿಂದ 11ರವರೆಗಿನ ಅವಧಿಯಲ್ಲಿ ನಡೆಯಲಿದೆ. ಈ ಎಲ್ಲಾ ಪ್ರದರ್ಶನಗಳನ್ನು ಕೊರೊನಾ  ಪರಿಸ್ಥಿತಿಯಲ್ಲಿ ಸರಕಾರ ನೀಡುವ ನಿರ್ದೇಶನಗಳಿಗೆ ಒಳಪಟ್ಟು ನಡೆಸಲಾಗುವುದು ಎಂದಿದ್ದಾರೆ.

ಕಲಾವಿದರು

ಪಟ್ಲ ಸತೀಶ್ ಶೆಟ್ಟಿ ಅವರು ಪ್ರಧಾನ ಭಾಗವತರಾಗಿದ್ದು, ಪ್ರಫುಲ್ಲಚಂದ್ರ ನೆಲ್ಯಾಡಿ ಭಾಗವತಿಕೆಯಲ್ಲಿ ಜೊತೆಗಿರುತ್ತಾರೆ.  ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳ್ಳಿಂಜಡ್ಕ, ಪ್ರಶಾಂತ್ ವಗೆನಾಡು, ಪೂರ್ಣೇಶ್ ಆಚಾರ್ಯ ಇರಲಿದ್ದಾರೆ.

ಉಜಿರೆ ನಾರಾಯಣ ಮತ್ತು  ಸಂದೇಶ್ ಮಂದಾರ ಹಾಸ್ಯ ಪಾತ್ರಧಾರಿಗಳು. ಅಕ್ಷಯ್ ಕುಮಾರ್, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು ಸ್ತ್ರೀ ಪಾತ್ರಧಾರಿಗಳು.

ರಾಧಾಕೃಷ್ಣ ನಾವಡ, ದಿವಾಣ ಶಿವಶಂಕರ ಭಟ್, ಸಂತೋಷ್ ಮಾನ್ಯ, ರಾಕೇಶ್ ರೈ, ಸತೀಶ್ ನೈನಾಡು, ಮಾಧವ ಕೊಳ್ತಮಜಲು, ಮೋಹನ್ ಬೆಳ್ಳಿಪ್ಪಾಡಿ, ಮನೀಷ್ ಪಾಟಾಳಿ, ಲೋಕೇಶ ಮುಚ್ಚೂರು, ಹರಿರಾಜ್ ಕಿನ್ನಿಗೋಳಿ, ರೋಹಿತ್, ದಿವಾಕರ, ಲಕ್ಷಣ, ಮಧುರಾಜ್, ಭುವನ್ ಮತ್ತಿತರ ಖ್ಯಾತ ಕಲಾವಿದರು ಹೊಸ ಮೇಳಕ್ಕೆ ಸೇರಿದ್ದಾರೆ.  















































error: Content is protected !!
Scroll to Top