ಉಡುಪಿ, ಅ. 17: ಮಾಸ್ಕ್ ಧರಿಸದೆ ಬೇಜವಾಬ್ದಾರಿಯಿಂದ ವರ್ತಿಸಿದ ಸರಕಾರಿ ಬಸ್ ನಿರ್ವಾಹಕನಿಗೆ ಜಿಲ್ಲಾಧಿಕಾರಿ ಜ. ಜಗದೀಶ್ ಅವರು ತಾನೇ ಬಸ್ ನಿಲ್ಲಿಸಿ ದಂಡ ಹಾಕಿದ್ದಾರೆ.
ನನ್ನ ಕುಟುಂಬ ನನ್ನ ಜವಾಬ್ದಾರಿ ಅಭಿಯಾನಕ್ಕಾಗಿ ತೆರಳುತ್ತಿದ್ದಾಗ ಹಾದು ಹೋದ ಒಂದು ಬಸ್ಸಿನ ನಿರ್ವಾಹಕ ಮಾಸ್ಕ್ ಧರಿಸದೆ ಕುಳಿತಿರುವುದು ಜಿಲ್ಲಾಧಿಕಾರಿಯವರ ಕಣ್ಣಿಗೆ ಬಿತ್ತು. ಕೂಡಲೇ ಬಸ್ ನಿಲ್ಲಿಸಿದ ಅವರು ನಿರ್ವಾಹಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ದಂಡ ಹಾಕಿದರು. ಬಸ್ಸಿನಲ್ಲಿ ಕೆಲವು ಪ್ರಯಾಣಿಕರೂ ಮಾಸ್ಕ್ ಧರಿಸಿರಲಿಲ್ಲ. ಅವರಿಗೂ ದಂಡ ಹಾಕಲು ಜಿಲ್ಲಾಧಿಕಾರಿ ಸೂಚಿಸಿದರು.







































































