ಚುನಾವಣೆ ನಡೆಸಲು ಆಯೋಗಕ್ಕೆ ಹೆಚ್ಚು ಉತ್ಸುಕತೆ ಏಕೆ?

ಕನಾ೯ಟಕದಲ್ಲಿ ಪಂಚಾಯತ್ ಚುನಾವಣೆಗೆ ಅವಧಿ ಪ್ರಾಪ್ತವಾಗಿದೆ.ಆದರೆ ಕೊರೊನ ಸಾಂಕ್ರಾಮಿಕ ವ್ಯಾಪಕವಾಗಿರುವುದರಿಂದ ಚುನಾವಣೆಗೆ ಸರ್ಕಾರ ಒಲವನ್ನು ತೋರಿಸುತ್ತಿಲ್ಲ ಹಾಗೂ  ಮುಂದೂಡಲು ಮನವಿ ಮಾಡಿಕೊಂಡಿದೆ.ಇದೇ ವೇಳೆ ಮುಂಚೂಣಿಯಲ್ಲಿರುವ ರಾಜಕೀಯ ಪಕ್ಷಗಳು ಕೂಡ  ಚುನಾವಣೆ ಮುಂದೂಡಲು ಆಯೋಗಕ್ಕೆ ಮನವಿ ಮಾಡಿವೆ ಎಂದು ತಿಳಿದು ಬಂದಿದೆ.

ಆದರೆ ಹಿತಾಸಕ್ತಿಯುಳ್ಳವರೋವ೯ರು ಚುನಾವಣೆ ನಡೆಸುವಂತೆ ಆಯೋಗಕ್ಕೆ ನಿದೇ೯ಶನ ನೀಡಲು ಕೋರಿ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದು ಅದರ ತನಿಖೆಯ ವೇಳೆ ಆಯೋಗ ತಾನು ಚುನಾವಣೆ ನಡೆಸಲು ಸಿದ್ಧ ಎಂಬ ಹಾಗೆ ಅಫಿಡವಿತ್ ಸಲ್ಲಿಸಿರುತ್ತದೆ.ಮುಂದುವರಿದು ಸಮುಜಾಯಿಷಿ  ನೀಡುತ್ತಾ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ

ನಿಜ, ಚುನಾವಣಾ ಆಯೋಗ ಸಿದ್ದತೆ ನಡೆಸಿರುವುದು ಯಾರ ಬಲದಲ್ಲಿ. ಇದೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೌಕರರ ಮೂಲಕವಲ್ಲವೇ! ಆಯೋಗಕ್ಕೆ ಪ್ರತ್ಯೇಕ ಸಿಬ್ಬಂದಿಯುಂಟೇ? ಈ ನೌಕರರೆಲ್ಲರೂ ಈಗ ಕೊರೊನಾ  ನಿಯಂತ್ರಣದಲ್ಲಿ ನಿರತರಾಗಿದ್ದಾರೆ. ಚುನಾವಣೆ ಕಾರ್ಯ ಹಾಗೂ ಅದರ ಪೂವ೯ ಸಿದ್ಧತೆಗೆ ಈ ನೌಕರರ ಸೇವೆಯನ್ನು ಬಳಸಿಕೊಂಡಾಗ ಆದ್ಯತೆಯ ನೆಲೆಯಲ್ಲಿ ನಿರ್ವಹಿಸಲಾಗುತ್ತಿರುವ ಕೊರೊನ ತಡೆಗಟ್ಟುವ ಕಾರ್ಯಕ್ರಮದ ಮೇಲೆ ಕೆಟ್ಟ ಪರಿಣಾಮವಾಗುವುದರಲ್ಲಿ ಸಂದೇಹವಿಲ್ಲ. ಮೊದಲೇ ಕರ್ನಾಟಕದಲ್ಲಿ ರೋಗ ನಿಯಂತ್ರಣಕ್ಕೆ ಬಾರದಿರುವ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ನಿಯಂತ್ರಣ ಕಾರ್ಯ ಚುರುಕುಗೊಳಿಸಲು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.

    ಪರಿಸ್ಥಿತಿ ಹೀಗಿರುವಾಗ ಚುನಾವಣೆ ನಡೆಸಲು ಆಯೋಗಕ್ಕೆ ಅತ್ಯಾಸಕ್ತಿ ಏಕೆ? ಕೇವಲ ಚುನಾವಣೆ ನಡೆಸುವುದರ ಬಗ್ಗೆ ಆಸಕ್ತಿ ತೋರಿಸುವುದಕ್ಕಿಂತ, ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಿರ್ವಹಿಸುವುದಕ್ಕೆ ಹೆಚ್ಚು ಧೃಡತೆ ತೋರಿಸುವುದೇ ಮುಖ್ಯ. ಮತದಾರರ ಪಟ್ಟಿಯ ಬಗ್ಗೆ ಪ್ರತಿ ಬಾರಿಯು ಆಕ್ಷೇಪಗಳು ಹಾಗೂ ಅಪಸ್ವರ ಕೇಳಿ ಬರುತ್ತಿದೆ.ಲೋಪರಹಿತ  ಮತದಾರರ ಪಟ್ಟಿ ತಯಾರಿ ಚುನಾವಣಾ ಆಯೋಗದ ಆರು ಮುಖ್ಯ ಕರ್ತವ್ಯಗಳಲ್ಲೊಂದು ಆಯಾ ರಾಜ್ಯಗಳಲ್ಲಿ ಸಿದ್ಧಪಡಿಸಲಾಗುವ ಮತದಾರರ ಪಟ್ಟಿಯಲ್ಲಿ ದೋಷಗಳು ನುಸುಳದಂತೆ ನೋಡಿಕೊಳ್ಳುವ ಜವಾಬ್ದಾರಿ ಅಂತಿಮವಾಗಿ ಆಯೋಗದ ಮೇಲಿದೆ. ಚುನಾವಣಾ ಕಾಲದಲ್ಲಿ ಭಾರಿ ಆಮಿಷಗಳು ನಡೆಯುತ್ತಿರುತ್ತವೆ.ಅವುಗಳು ನಡೆಯದಂತೆ ಕಣ್ಗಾಪುವಿನ  ಕೆಲಸದಂಥ ಮಹತ್ತರ ಕಾರ್ಯಗಳ ಬಗ್ಗೆ ಆಯೋಗ ಹೆಚ್ಚು ಗಮನಹರಿಸಬೇಕಾದುದು ಅಗತ್ಯ. ಸಮುದಾಯದಲ್ಲಿ ಬಲವಾದ ಆರೋಗ್ಯ ಸಮಸ್ಯೆ ಇರುವಾಗ”ಪ್ರಾಣಕ್ಕಿಂತ ಓಟು ಅಮೂಲ್ಯವೇ?” ಎಂದು ಪ್ರೊ.ಕೆ ಸುರೇಂದ್ರನಾಥ ಶೆಟ್ಟಿಯವರು newskarkala.com ಸುದ್ದಿ ತಾಣದಲ್ಲಿ  ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.  ಮೇಲಾಗಿ ಚುನಾಯಿತ ಸರಕಾರವೇ ಚುನಾವಣೆ ಮುಂದೂಡಲು ಮನವಿ ಸಲ್ಲಿಸುವಾಗ  ಚುನಾವಣಾ ಆಯೋಗಕ್ಕೆ ಅತ್ಯಾಸಕ್ತಿ ಏಕೆ? ಈ ನಡುವೆ ನ್ಯಾಯಾಲಯವೂ ಸ್ಪಷ್ಟೋಕ್ತಿಯಲ್ಲಿ ಏನೂ ಹೇಳದಿರುವುದು ದುರದೃಷ್ಟಕರ.

      ಬೇಳೂರು ರಾಘವ ಶೆಟ್ಟಿ















































































































































error: Content is protected !!
Scroll to Top