ಕಾರ್ಕಳ, ಅ.13: ಕಲಾರಂಗ ಕಾರ್ಕಳ ತಂಡದ ಪಾತೆರುಜ ದಾನೆ…? ತುಳು ನಾಟಕದ ತರಬೇತಿಯ ಮುಹೂರ್ತ ಅ.11ರಂದು ಪೆರ್ವಾಜೆಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನೆರವೇರಿತು. ತಂಡದ ಪ್ರತಿಭಾವಂತ ಹಿರಿಯ ಮತ್ತು ಕಿರಿಯ ಕಲಾವಿದರ ಸಂಗಮದಲ್ಲಿ ಈ ನಾಟಕ ಹಿಂದೆ 78ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಕಂಡು ಜನಮೆಚ್ಚುಗೆ ಗಳಿಸಿದೆ.
ಪಾತೆರುಜ ದಾನೆ…? ನಾಟಕವನ್ನು ಕೆ. ಎಸ್. ಪ್ರಸನ್ನ ಕಿನ್ನಿಗೋಳಿ ರಚಿಸಿ, ನಟಿಸಿ, ನಿರ್ದೇಶಿಸಿದ್ದಾರೆ. ಮುಹೂರ್ತ ಕಾರ್ಯಕ್ರಮದಲ್ಲಿ ತಂಡದ ಹಿರಿಯ ಕಲಾವಿದರಾದ ಮಾಧವ ಭಟ್, ರಾಮಚಂದ್ರ ನೆಲ್ಲಿಕಾರು ಹಾಗೂ ಕಲಾರಂಗ ಕಾರ್ಕಳ ತಂಡದ ಅಧ್ಯಕ್ಷ ಚಂದ್ರಹಾಸ ಸುವರ್ಣ, ನಿರ್ದೇಶಕ ಕೆ.ಎಸ್. ಪ್ರಸನ್ನ ಕಿನ್ನಿಗೋಳಿ ಹಾಗೂ ಕಲಾರಂಗ ತಂಡದ ಎಲ್ಲ ಕಲಾವಿದರು ಉಪಸ್ಥಿತರಿದ್ದರು.






























































