ಕಾರ್ಕಳ ರೋಟರಿ : ವಿವಿಧ ಸ್ಪರ್ಧೆಗಳ ಸಮಾರೋಪ

ಕಾರ್ಕಳ, ಅ.13 : ರೋಟರಿ ಆನ್ಸ್  ಕ್ಲಬ್ ಮತ್ತು  ರೋಟರಾಕ್ಟ್  ಕ್ಲಬ್ ಕಾರ್ಕಳ ಇವರು ನಡೆಸಿದ ರಾಜ್ಯ ಮಟ್ಟದ ಪರಿಸರ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ, ಸ್ವಾತಂತ್ರ್ಯ  ದಿನಾಚರಣೆ ಮತ್ತು ಗಣೇಶ್ ಚತುರ್ದಶಿಯ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಸಮಾರೋಪ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವು ಅ.13ರಂದು ರೋಟರಿ ಭವನದಲ್ಲಿ ನಡೆಯಿತು.

ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಕತೆ, ಕವನ, ಪ್ರಬಂಧ ಮತ್ತು ಕೃಷ್ಣಾಷ್ಟಮಿಯ ದಿನಾಚರಣೆಯ ಪ್ರಯುಕ್ತ ಮುದ್ದುಕೃಷ್ಣ, ಮುದ್ದು ರಾಧೆ, ಯಶೋದಾ ಕೃಷ್ಣ , ಸ್ವಾತಂತ್ರ್ಯ  ದಿನಾಚರಣೆಯ ಅಂಗವಾಗಿ ಸ್ವಾತಂತ್ರ್ಯ  ಹೋರಾಟಗಾರ ಛದ್ಮವೇಷ, ದೇಶ ಭಕ್ತಿಗೀತೆ, ಭಾಷಣ ಹಾಗೂ ಗಣೇಶ ಚತುರ್ಥಿ  ಪ್ರಯುಕ್ತ ಮಣ್ಣಿನಲ್ಲಿ ಮಾಡಿದ ಗಣಪತಿಯ ಕಲಾಕೃತಿ, ಧಾನ್ಯಗಳ ಗಣಪತಿ, ಭಕ್ತಿಗೀತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ 4600 ಸ್ಪರ್ಧಿಗಳು ಆನ್‌ ಲೈನ್ ಮೂಲಕ ಭಾಗವಹಿಸಿ ದಾಖಲೆ ಬರೆದಿದ್ದರು.

ಕಾರ್ಕಳದ ಅಜ್ಜಿಮನೆ ಖ್ಯಾತಿಯ ವೀಣಾ ಶಾನುಭೋಗ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷೆ ಸುವರ್ಣ ನಾಯಕ್ ಇಡೀ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.   ಈ ಎಲ್ಲ ಸ್ಪರ್ಧೆಗಳ ಬಹುಮಾನಗಳ ಪ್ರಾಯೋಜಕಿ ರೋಟರಿ ಆನ್ಸ್ ಅಧ್ಯಕ್ಷೆ ರಮಿತಾ ಶೈಲೇಂದ್ರ ಅಧ್ಯಕ್ಷತೆ ವಹಿಸಿದ್ದರು. ರೋಟರಾಕ್ಟ್ ಅಧ್ಯಕ್ಷ ರಾಹುಲ್ ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆನ್ಸ್ ಕಾರ್ಯದರ್ಶಿ ಸುಮಾ ನಾಯಕ್ ಅವರು ನಿರೂಪಿಸಿದರು. ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಪ್ರಶಾಂತ್ ಆಚಾರ್ಯ ವಂದಿಸಿದರು. ಸ್ಪರ್ಧೆಯ ವಿಜೇತರು ಮತ್ತು ಅವರ ಪೋಷಕರು ಉಪಸ್ಥಿತರಿದ್ದರು.





























































































































error: Content is protected !!
Scroll to Top