ಮೋದಿಯನ್ನು ಕೊಲ್ಲುವ ಬಾಂಬ್‌ ಏಕೆ ತಯಾರಾಗಿಲ್ಲ : ಮಾಜಿ ಶಾಸಕನ ವಿವಾದಾತ್ಮಕ ಹೇಳಿಕೆ

ಭೋಪಾಲ್, ಅ.5 : ಮಧ್ಯಪ್ರದೇಶದ ಜೆಜಿಪಿ ಮಾಜಿ ಶಾಸಕ ರಾಮ್‌ಗುಲಂ ಉಯ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವ  ಬಾಂಬ್ ಅನ್ನು ಯಾಕೆ ಯಾರೂ ತಯಾರಿಸುತ್ತಿಲ್ಲ ಎಂದು ಸಾರ್ವಜನಿಕ ಸಭೆಯಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಸಿಯೋನಿ ಜಿಲ್ಲೆಯಲ್ಲಿ ನಡೆದ ಗ್ರಾಮಸ್ಥರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸಿಉವ ವಿಚಾರದಲ್ಲಿ  ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಉಯ್ಕೆ ಒಬ್ಬ ವ್ಯಕ್ತಿ(ಪ್ರಧಾನಿ) 130 ಕೋಟಿ ಜನರ ಇಡೀ ದೇಶವನ್ನು ಮರುಳು ಮಾಡುತ್ತಿದ್ದಾನೆ. ಪ್ರಸ್ತುತ ಕೇಂದ್ರ ಸರ್ಕಾರವು ಮಹಾಮಾರಿ ವೈರಸ್ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದರು. 

ಅಬ್ ಬಾಂಬ್ ನಹಿ ಬನ್ ರಹೀನ್ ಹೈ ಕ್ಯಾ, ಇಂದಿರಾ ಗಾಂಧಿ ಕೋ ಮಾರ್ನೆ ಕೆಲಿಯೆ ಗೋಲಿ ಬನ್ ಗಯೆ, ರಾಜೀವ್ ಗಾಂಧಿ ಕೋ ಮಾರ್ನೆ ಕೆಲಿಯೆ ಮಾನವ್ ಬಾಂಬ್ ಬನ್ ಗಯೆ, ಮೋದಿಜಿ ಕೋ ಉಡಾನೆ ಕೆಲಿಯೆ ಕೊಯಿ ಬಾಂಬ್ ನಹಿ ಬಾನಾ ಸಕ್ ರಹಾ ಹೈ ಕ್ಯಾ(ಬಾಂಬ್‌ಗಳ ಉತ್ಪಾದನೆಯನ್ನು ನಿಲ್ಲಿಸಲಾಗಿದೆಯಾ. ಇಂದಿರಾ ಗಾಂಧಿಯನ್ನು ಹತ್ಯೆ ಮಾಡಲು ಗುಂಡುಗಳು ಇದ್ದವು, ರಾಜೀವ್ ಗಾಂಧಿಯನ್ನು ಕೊಲ್ಲಲು ಮಾನವ ಬಾಂಬ್ ರೆಡಿಯಾಗಿತ್ತು. ಆದರೆ ಮೋದಿಜಿಯನ್ನು ಕೊಲ್ಲಲು ಯಾಕೆ ಯಾರೂ ಬಾಂಬ್ ತಯಾರಿಸಲು ಸಾಧ್ಯವಾಗಿಲ್ಲ) ಎಂಬುದಾಗಿ ಅವರು ಹೇಳಿದ್ದರು.































































































































































error: Content is protected !!
Scroll to Top