ಬಾಲಿವುಡ್ ತಾರೆಗಳ ಪ್ರೇಮ ಪುರಾಣಗಳು-ಯಾರ ಬುಟ್ಟಿಗೂ ಬೀಳದ ಬಚ್ಚನ್‌

ಬಾಲಿವುಡ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಪ್ರಣಯ ಕತೆ ಅಮಿತಾಭ್ ಬಚ್ಚನ್ ಮತ್ತು ರೇಖಾ ಅವರದ್ದು. ಜಯಾರನ್ನು ವಿವಾಹವಾದ ಬಳಿಕವೂ ಬಚ್ಚನ್ – ರೇಖಾ ಪ್ರಣಯ ಮುಂದುವರಿದಿತ್ತು. ಈ ರಿಯಲ್ ಪ್ರೇಮಕತೆಯನ್ನು ಆಧರಿಸಿ ‘ ಸಿಲ್ ಸಿಲಾ’ ಚಿತ್ರವೂ ತಯಾರಾಗಿತ್ತು.  ಅಮಿತಾಭ್, ರೇಖಾ ಮತ್ತು ಜಯಾ ಬಚ್ಚನ್ ಇದರಲ್ಲಿ ನಟಿಸಿದ್ದರು. ಇತ್ತ ರೇಖಾ – ಅಮಿತಾಭ್ರ ಪ್ರಣಯವನ್ನು ಗಟ್ಟಿಗೊಳಿಸಲು ಸಹಕರಿಸಿದವರು ರೇಖಾರ ಖಾಸಾ ಗೆಳತಿ ಶ್ರೀದೇವಿ ಎನ್ನಲಾಗುತ್ತಿದೆ. ಹೀಗೆ ಸಹಕರಿಸುತ್ತಾ ಸಹಕರಿಸುತ್ತಾ ಸ್ವತಃ ಶ್ರೀದೇವಿಗೆ ಬಚ್ಚನ್ರ ಮೇಲೆ ಮೋಹವುಂಟಾಗಿತ್ತು ಎನ್ನಲಾಗುತ್ತಿದೆ.ಆದರೆ ಜಯಾ ಬಚ್ಚನ್ರ ಬಿಗಿ ಹಿಡಿತದಿಂದಾಗಿ ಬಚ್ಚನ್ ಸಂಸಾರ ಉಳಿಯಿತು. ರೇಖಾ ಮತ್ತು  ಶ್ರೀದೇವಿಗೆ ಬಚ್ಚನ್ ರನ್ನು ಬುಟ್ಟಿಗೆ ಹಾಕಲು ಸಾಧ್ಯವಾಗಲೇ ಇಲ್ಲ.

ಏಳಿಂಜೆ ನಾಗೇಶ್,ಮುಂಬಯಿ – 98929 80750















































































































































error: Content is protected !!
Scroll to Top