ಕಾರ್ಕಳ, ಅ.5 : ಮುಂಡ್ಕೂರು ದೊಡ್ಡಮನೆ ಅಕ್ಷತಾ ರೈ ಅವರಿಗೆ ನೀಟ್ ಎಸ್‌ಎಸ್ (super speciality courses) ಪರೀಕ್ಷೆಯಲ್ಲಿ ಅನೆಸ್ತಶಿಯಾ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ನಾಲ್ಕನೇ ರ್ಯಾಂಕ್ ಮತ್ತು ಕ್ರಿಟಿಕಲ್ ಕೇರ್ ವಿಭಾಗದಲ್ಲಿ 165ನೇ ರ್ಯಾಂಕ್ ಸಿಕ್ಕಿದೆ. ಇವರು ಪಂಜದಗುತ್ತು ದಿ.ವಿಶ್ವನಾಥ ರೈ ಹಾಗೂ ಮುಂಡ್ಕೂರು ದೊಡ್ಡಮನೆ ಹೇಮಾ ವಿ.ರೈಯವರ ಪುತ್ರಿ.ಅಕ್ಷತಾ ಬೆಂಗಳೂರಿನಲ್ಲಿ ಕ್ರಿಟಿಕಲ್ ಕೇರ್ ವಿಭಾಗದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ನಿರ್ಧರಿಸಿದ್ದಾರೆ.
ನೀಟ್ ಎಸ್‌ಎಸ್ ಪರೀಕ್ಷೆ : ಮುಂಡ್ಕೂರಿನ ಅಕ್ಷತಾ ರೈಗೆ ನಾಲ್ಕನೇ Rank






































































