ಕಾರ್ಕಳ : ಬೆಳ್ಮಣ್ ಗ್ರಾಮದ ಪಡೀಯಾರ್ ಕಂಪೌಂಡ್ ಬಳಿ ಟಿಪ್ಪರ್ (KA 19 C 5793) ಹಿಂಬದಿಯ ಬಾಗಿಲು ಪಾದಚಾರಿಗಳಿಗೆ ಬಡಿದ ಘಟನೆ ಅ. 3ರಂದು ನಡೆದಿದೆ. ಪರಿಣಾಮ ಕೃಷ್ಣ ಹಾಗೂ ನಂದಳಿಕೆ ಗ್ರಾಮದ ಗೋಳಿಕಟ್ಟೆ ರಮೇಶ್ ಪೂಜಾರಿ ಗಾಯಗೊಂಡಿರುತ್ತಾರೆ. ಕೃಷ್ಣ ಎಂಬವರ ತಲೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು, ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಮೇಶ್ ಪೂಜಾರಿ ಅವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ. ಅಪಘಾತ ನಡೆಸಿದ ಟಪ್ಪರ್ ಚಾಲಕನು ಸ್ಥಳದಿಂದ ಟಿಪ್ಪರ್ ಸಹಿತ ಪರಾರಿಯಾಗಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಮಣ್ : ಟಿಪ್ಪರ್ ಢಿಕ್ಕಿ-ಚಾಲಕ ಟಿಪ್ಪರ್ ಸಹಿತ ಪರಾರಿ









































































