ಸಾಣೂರು ಗ್ರಾ.ಪಂ.ಜಮಾಬಂದಿ

ಕಾರ್ಕಳ, ಸೆ. 17: ಸಾಣೂರು ಗ್ರಾಮ ಪಂಚಾಯತ್‌ನ 2019-20ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಜಮಾಬಂದಿ ಕಾರ್ಯಕ್ರಮವು ಜಮಾಬಂದಿ ನೋಡೆಲ್ ಅಧಿಕಾರಿಗಳಾದ ವಾರಿಜಾಕ್ಷಿ ಅರಣ್ಯಾಧಿಕಾರಿಗಳು, ಸಾಮಾಜಿಕ ಅರಣ್ಯ, ಕಾರ್ಕಳ ಇವರ ಉಪಸ್ಥಿತಿಯಲ್ಲಿ ಸಾಣೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.

          ಪಂ. ಅಭಿವೃದ್ಧಿ ಅಧಿಕಾರಿ ಮಧು ಎಂ.ಸಿ. ಅವರು ಜಮಾಬಂದಿ ಮಾಹಿತಿ ನೀಡಿದರು. ಕಾರ್ಯದರ್ಶಿ ಸವಿತಾ ಪ್ರಭು ಅವರು ವರದಿ ವಾಚಿಸಿ ನಿರೂಪಣೆಗೈದರು. ಕಿರಿಯ ಇಂಜಿನಿಯರ್ ಅನಿತಾ, ಜಮಾಬಂದಿ ವರದಿ ತಯಾರಿಕೆಗೆ ಸಹಕರಿಸಿದ ಹಿರ್ಗಾನ ಪಂ.  ಕಾರ್ಯದರ್ಶಿ ಸುಮಾ , ಇಂ.ಉಪವಿಭಾಗದ ವಿಶ್ವನಾಥ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.



































































































error: Content is protected !!
Scroll to Top