ಕಾರ್ಕಳ : ಪ್ರಧಾನಿ ಮೋದಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ನಗರ ಬಿಜೆಪಿ ವತಿಯಿಂದ ಪತ್ತೊಂಜಿಕಟ್ಟೆ ಕಾಲೊನಿಯಲ್ಲಿ ಸೆ. 15ರಂದು ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಲಾಯಿತು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು. ನಗರ ಬಿಜೆಪಿ ಅಧ್ಯಕ್ಷ ರೆಂಜಾಳ ಅನಂತಕೃಷ್ಣ ಶೆಣೈ, ಉಪಾಧ್ಯಕ್ಷ ಯೋಗೇಶ್ ನಾಯಕ್, ಕಾರ್ಯದರ್ಶಿ ಅಶೋಕ್ ಸುವರ್ಣ, ಪುರಸಭಾ ಸದಸ್ಯೆ ಮಮತಾ ಪೂಜಾರಿ, ನಗರ ಮಹಿಳಾ ಮೋರ್ಚಾ ಕಾರ್ಯದರ್ಶಿ ಮಮತಾ ಸುವರ್ಣ, ಸುಭಾಶ್ ಸುವರ್ಣ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪತ್ತೊಂಜಿ ಕಟ್ಟೆ : ನಗರ ಬಿಜೆಪಿ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ















