ಅಜಬ್ ಫಿಲ್ಮಿ ದುನಿಯಾ ಕೀ ಗಜಬ್ ಕಹಾನಿ- ಮನೋಜ್‌ ಕುಮಾರ್‌ ಹೀರೊ ಆದ ಕತೆ

ನಿರ್ಮಾಪಕ, ನಿರ್ದೇಶಕ ಲೇಖ್ ರಾಜ್ ಭಾಖ್ರಿ ನಟ ಮನೋಜ್ ಕುಮಾರ್ ಗೆ ಸಂಬಂಧಿಯಾಗಿದ್ದರು.ಒಮ್ಮೆ ಸಮಾರಂಭದಲ್ಲಿ ಮನೋಜ್ ರನ್ನು ನೋಡಿದ ಭಾಖ್ರಿ ” ನೋಡಲು ಹೀರೋ ಥರಾ ಇದ್ದೀಯಾ, ಮುಂಬಯಿಗೆ ಬಾ ಹೀರೋ ಆಗು” ಎಂದಿದ್ದರು.ಇದನ್ನು ನಂಬಿ ಮನೋಜ್ ಗಂಟುಮೂಟೆ ಕಟ್ಟಿ ಮುಂಬಯಿಗೆ ಬಂದರು.ತಿಂಗಳು ಆರು ಕಳೆದರೂ ಮನೋಜ್ ರನ್ನು  ಹೀರೋ ಮಾಡುವ ಯಾವ ಯೋಜನೆಯೂ ಭಾಖ್ರಿಯವರಲ್ಲಿ ಇರಲಿಲ್ಲ.ಮನೋಜ್ ರ ಸಹನೆಯ ಕಟ್ಟೊಡೆಯಿತು.ಒಂದು ದಿನ ಕೇಳಿಯೇ ಬಿಟ್ಟರು. “ನಾನು ಯಾವಾಗ ಸಿನಿಮಾಗಳಲ್ಲಿ  ಕೆಲಸ ಮಾಡಬಲ್ಲೆ ?” ಅದಕ್ಕೆ ಲೇಖಿರಾಜ್ ಹೇಳಿದರು,’ ಈವರೆಗೆ ನಿನ್ನ ಒಂದು ಶೂ ಕೂಡಾ ಸವೆದಿಲ್ಲ.ಇಲ್ಲಿ ಹೆಚ್ಚಿನವರ ಬದುಕೇ ಸವೆದು ಹೋಗುತ್ತದೆ”.

ಸರಿ ‘ಫ್ಯಾಶನ್’ ( 60 ರ ದಶಕದ) ಚಿತ್ರದಲ್ಲಿ ಒಂದು ಪಾತ್ರ ಕೊಟ್ಟರು.ಅದು 90 ವರ್ಷ ಪ್ರಾಯದ ಭಿಕ್ಷುಕನ ಪಾತ್ರ! ನಂತರ ಎರಡು ಚಿತ್ರಗಳಲ್ಲಿ ಪುಟ್ಟ  ಪಾತ್ರಗಳನ್ನು ನೀಡಿದರು.

ಎಚ್.ಎಸ್.ರವೈಲ್ ತನ್ನ ‘ಕಾಂಚ್ ಕೆ ಗುಡಿಯಾ ‘ ದಲ್ಲಿ ಪಾತ್ರ ನೀಡಿದರು.ಬಳಿಕ ‘ಹರಿಯಾಲಿ ಔರ್ ರಾಸ್ತಾ ‘ ಚಿತ್ರದಲ್ಲಿ ಹೀರೋ ಪಾತ್ರ ನೀಡಿದರು.ಆ ಕಾಲದಲ್ಲಿ ಈ ಚಿತ್ರ ಭರ್ಜರಿ ಐದೂವರೆ ಕೋಟಿ ರೂಪಾಯಿ ಸಂಪಾದಿಸಿತ್ತು.ಮನೋಜ್ ಆಗಲೇ ಯಶಸ್ಸಿನ ಬೆನ್ನು ಹತ್ತಿದರು.

ಏಳಿಂಜೆ ನಾಗೇಶ್ 98929 80750









































































































error: Content is protected !!
Scroll to Top