ಬೆಂಗಳೂರು, ಸೆ. 15: ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ಸರಕಾರ ಅಡಳಿತಾತ್ಮಕ ವೆಚ್ಚಗಳನ್ನು ನಿಭಾಯಿಸಿಕೊಂಡು ಹೋಗಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ 33,000 ಕೋ. ರೂ. ಸಾಲ ಪಡೆಯಲು ನಿರ್ಧರಿಸಿದೆ. ಇದರಿಂದಾಗಿ ರಾಜ್ಯದ ಸಾಲದ ಮೊತ್ತ 80,000 ಕೋ.ರೂ.ಗೇರಲಿದೆ.
ರಾಜ್ಯದ ಜಿಎಸ್‌ಟಿ ಪಾಲು 18,289 ಕೋ.ರೂ.ಯನ್ನು ಆರ್‌ಬಿಐಯಿಂದ ಸಾಲ ಎತ್ತುವ ಮೂಲಕ ಭರ್ತಿ ಮಾಡಿಕೊಳ್ಳಲು ಸರಕಾರ ಈಗಾಗಲೇ ತೀರ್ಮಾನಿಸಿದೆ. ಇದಲ್ಲದೆ 33,000 ಕೋ.ರೂ. ಸಾಲ ಪಡೆಯಲಿದೆ.
ಸಾಲ ಪಡೆಯುವ ಮಿತಿಯನ್ನು ಶೆ.3ರಿಂದ ಶೇ.5ಕ್ಕೇರಿಸುವ ಸಲುವಾಗಿ ವಿತ್ತೀಯ ಕೊರತೆ ಕಾಯಿದೆಗೆ ಸರಕಾರ ತಿದ್ದುಪಡಿ ಮಾಡಲಿದೆ.
















